ನಾವು ಹಲಾಲ್, ಹರಾಂ ಮಾಂಸ ಅಂತೆಲ್ಲ ನೋಡಲ್ಲ: ಎಚ್. ಡಿ.ಕುಮಾರಸ್ವಾಮಿ

Prasthutha|

► ಸಮಾಜಕ್ಕೆ ಧಕ್ಕೆ ಉಂಟು ಮಾಡುವ ಸೂಕ್ಷ್ಮ ವಿಷಯವನ್ನು ಮಾಧ್ಯಮಗಳು ವೈಭವೀಕರಣ ಮಾಡುತ್ತಿವೆ

- Advertisement -

ಬೆಂಗಳೂರು: ಸಮಾಜಕ್ಕೆ ಧಕ್ಕೆ ಉಂಟು ಮಾಡುವ ಸೂಕ್ಷ್ಮ ವಿಷಯವನ್ನು ಮಾಧ್ಯಮಗಳು ವೈಭವೀಕರಣ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಇಂದು ಚುನಾವಣೆ ಸುಧಾರಣೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಹಿಜಾಬ್ ಆಯಿತು, ಜಾತ್ರೆಗಳಲ್ಲಿ ವ್ಯಾಪಾರ ಬಂದ್ ಆಯಿತು, ಈಗ ಯುಗಾದಿಗೆ ಹಲಾಲ್ ಚರ್ಚೆ ನಡೆಯುತ್ತಿದೆ. ಮೂಲತಃ ನಾವು ಮಾಂಸಾಹಾರಿಗಳು. ನಾವು ಹಲಾಲ್, ಹರಾಂ ಮಾಂಸ ಅಂತೆಲ್ಲ ನೋಡಲ್ಲ. ಹಾಗಂತ ನಾವು ಮಾಂಸವನ್ನು ತಂದು ಪೂಜೆಗೂ ಇಡಲ್ಲ. ಹಬ್ಬದ ಮರುದಿನ ಮಾಡುವ ವರ್ಸತೊಡಕು ಗುಡ್ಡೆ ಮಾಂಸ ಮಾಡುತ್ತಾರೆ. ಈಗ ಇಂತಹ ಅಶಾಂತಿಯ ವಾತಾವರಣ ಯಾಕೆ ಸೃಷ್ಟಿಸಬೇಕು? ಮಾಧ್ಯಮಗಳು ಇಂಥ ಸುದ್ದಿಗಳನ್ನು ತೋರಿಸಲೇಬಾರದು ಎಂದು ಮಾಜಿ ಮುಖ್ಯಮಂತ್ರಿ ಮನವಿ ಮಾಡಿದರು.

- Advertisement -

ಶಾಂತಿಯನ್ನು ಹಾಳು ಮಾಡುವಂಥ ವಿಷಯಗಳಿಗೆ ಮಾಧ್ಯಮಗಳು ಹೆಚ್ಚು ಮಹತ್ವ ಕೊಟ್ಟರೆ, ಅದರಿಂದ  ರಾಜ್ಯ ಹಾಳಾದರೆ ಮಾಧ್ಯಮಗಳೇ ಉತ್ತರದಾಯಿಗಳಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಾಟ್ಸಪ್ ನಲ್ಲಿ ಇಂತಹ ಸಾಕಷ್ಟು ಪ್ರಚೋದನೆಯ ಪೋಸ್ಟ್ ಗಳು ಬರುತ್ತಿವೆ. ಇಂಥ ಪ್ರಚೋದನಾತ್ಮಕ ಓದಿದಾಗ ನನಗೆ ಬಹಳ ನೋವಾಯಿತು ಎಂದ ಅವರು, ವಾಟ್ಸಾಪ್ ಮತ್ತಿತೆರೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿರುವ ಪೋಸ್ಟ್ ಗಳನ್ನು ಸದನದಲ್ಲಿ ಓದಿದರು.

ವ್ಯಾಪಾರ ಮಾಡಲಿಕ್ಕೆ ಹಿಂದೂಗಳ ಅಂಗಡಿಗಳನ್ನೇ ಹಿಂದೂಗಳು ಆಯ್ಕೆ ಮಾಡಿಕೊಳ್ಳಿ ಎಂಬ  ಸಂದೇಶಗಳು ವ್ಯಾಪಕವಾಗಿ ರವಾನೆ ಆಗುತ್ತಿವೆ ಎಂದು ಕುಮಾರಸ್ವಾಮಿ ಅವರು, ಮುಸ್ಲಿಂ ಸಮುದಾಯದವರ ಅಂಗಡಿಗಳಿಗೆ ಹೋಗಬೇಡಿ ಎಂದು ಹರಿದಾಡುತ್ತಿರುವ ಸಂದೇಶವನ್ನು ಅವರು ಕಲಾಪದಲ್ಲಿ ಓದಿದರು.



Join Whatsapp