ಶ್ರೀಲಂಕಾದಲ್ಲಿ ಭೀಕರ ಬರ । ಪ್ರತಿನಿತ್ಯ 10 ಗಂಟೆ ವಿದ್ಯುತ್ ಸೇವೆ ಸ್ಥಗಿತ

Prasthutha|

ಕೊಲಂಬೊ: ತೀವ್ರ ಹಣದುಬ್ಬರ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕಾದಲ್ಲಿ ಪ್ರತಿನಿತ್ಯ 7 – 10 ಗಂಟೆಗಳ ಕಾಲ ವಿದ್ಯುತ್ ಸೇವೆಯಲ್ಲಿ ಸ್ಥಗಿತಗೊಳಿಸುವ ನಿರ್ಧಾರವನ್ನು ಇನ್ನಷ್ಟು ದಿನ ಮುಂದುವರಿಸಲಿದೆ. ಈ ಹಿನ್ನೆಲೆಯಲ್ಲಿ ಜನರು ರಾತ್ರಿ ಸಮಯದಲ್ಲಿ ಕತ್ತಲೆಯಲ್ಲಿ ಕಾಲ ಕಳೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

- Advertisement -

ವಿದ್ಯುತ್ ಉತ್ಪಾದಿಸಲು ಬೇಕಾದ ಇಂಧನದ ಕೊರತೆಯಿಂದಾಗಿ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಹೇಳಲಾಗಿದೆ. ಕಳೆದ ಒಂದು ತಿಂಗಳಿನಿಂದ ಶ್ರೀಲಂಕಾದಲ್ಲಿ ಪ್ರತಿನಿತ್ಯ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ಅತಿಯಾದ ವಿದೇಶಿ ವಿನಿಮಯ ಕೊರತೆಯಿಂದಾಗಿ ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಮತ್ತು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದ್ದು, ಇಂಧನದ ಕೊರತೆಯಿಂದಾಗಿ ಜನರು ಪೆಟ್ರೋಲ್ ಬಂಕ್ ಮತ್ತು ಸೀಮೆಎಣ್ಣೆ ಕೇಂದ್ರದ ಎದುರಲ್ಲಿ ಕ್ಯೂ ನಿಂತಿದ್ದಾರೆ. ಸದ್ಯ ಪೆಟ್ರೋಲ್ ಬಂಕ್ ಮತ್ತು ಸೀಮೆ ಎಣ್ಣೆ ಕೇಂದ್ರಗಳಿಗೆ ಶ್ರೀಲಂಕಾ ಸೇನೆ ಕಾವಲು ನಿಂತಿದೆ.

Join Whatsapp