ರೈತರ ಹೋರಾಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕೇಂದ್ರವೇ ಕಾರಣ : ಫರಾ ಖಾನ್ ಅಲಿ

Prasthutha|

- Advertisement -

ಹೊಸದಿಲ್ಲಿ : ರೈತರ ಹೋರಾಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವ ರೀತಿಯಲ್ಲಿ ಕೇಂದ್ರ ಸರಕಾರ ಉಲ್ಬಣಗೊಳಿಸಿದೆ ಎಂದು ಪ್ರಮುಖ ವಿನ್ಯಾಸಕಿ ಫರಾ ಖಾನ್ ಅಲಿ ಟೀಕಿಸಿದ್ದಾರೆ. ‘ನಮ್ಮ ದೇಶದ ಸಮಸ್ಯೆಗಳ ಬಗ್ಗೆ ಇತರ ದೇಶಗಳ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಕೇಂದ್ರ ಸರಕಾರವು ಈ ಸಮಸ್ಯೆಯನ್ನು ಬಗೆಹರಿಸದೆ ಇರುವುದಾಗಿದೆ. ಇತರ ಸರಕಾರಗಳು ಮತ್ತು ದೇಶಗಳ ಬಗ್ಗೆ ಪ್ರತಿಕ್ರಿಯಿಸಲು ಹಿಂಜರಿಯದ ನಾವು, ಅಂತರರಾಷ್ಟ್ರೀಯ ವ್ಯಕ್ತಿಯೊಬ್ಬರು ಮಾತನಾಡುವಾಗ ಅಸಮಾಧಾನಗೊಂಡಿದ್ದೇವೆ ಎಂದು ಫರಾ ಅಲಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ರೈತರ ಹೋರಾಟವನ್ನು ಬೆಂಬಲಿಸಿ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಕಾರ್ಯಕರ್ತೆ ಗ್ರೇಟ್ ಥಂಬರ್ಗ್ ಮತ್ತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದರು. ಇದರೊಂದಿಗೆ ರೈತರ ಹೋರಾಟವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಭಾರತದಲ್ಲೂ ರೈತರ ಹೋರಾಟಕ್ಕೆ ಬೆಂಬಲ ಹೆಚ್ಚಾಗತೊಡಗಿತ್ತು.

Join Whatsapp