ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಅಂತಾರಾಷ್ಟ್ರೀಯ ಹವಾಮಾನ ಕಾರ್ಯಕರ್ತೆ ಗ್ರೆಟಾ ಥಂಬರ್ಗ್ ವಿರುದ್ಧ ದೆಹಲಿಯಲ್ಲಿ ಕೇಸ್

Prasthutha|

ನವದೆಹಲಿ : ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್ ಮಾಡಿರುವ ಹವಾಮಾನ ಬದಲಾವಣೆ ಕಾರ್ಯಕರ್ತೆ ಗ್ರೆಟಾ ಥಂಬರ್ಗ್ ವಿರುದ್ಧ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

- Advertisement -

ಭಾರತದಲ್ಲಿನ ರೈತರ ಪ್ರತಿಭಟನೆ ಬೆಂಬಲಿಸಿ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಮಾಡಿದ ಬೆನ್ನಲ್ಲೇ, ಗ್ರೆಟಾ ಥಂಬರ್ಗ್ ಕೂಡ ಟ್ವೀಟ್ ಮಾಡಿ ತಮ್ಮ ಬೆಂಬಲ ಸೂಚಿಸಿದ್ದರು.

ರೈತರ ಪ್ರತಿಭಟನೆ ಕುರಿತ ಸಿಎನ್ ಎನ್ ವರದಿಯ ಲಿಂಕ್ ಶೇರ್ ಮಾಡಿದ್ದ ಗ್ರೆಟಾ ಥಂಬರ್ಗ್, ಭಾರತದಲ್ಲಿನ ರೈತರ ಪ್ರತಿಭಟನೆ ಜೊತೆ ನಾವು ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದರು.

- Advertisement -

ನಂತರ ಫಾಲೊಅಪ್ ಟ್ವೀಟ್ ಒಂದರಲ್ಲಿ ಗ್ರೆಟಾ ಥಂಬರ್ಗ್, “ಭಾರತದ ನೆಲದಲ್ಲಿರುವ ಜನರಿಗೆ ನೀವು ಸಹಾಯ ಮಾಡಬೇಕೆಂದಿದ್ದರೆ, ಇಲ್ಲಿ ಅಪ್ ಡೇಟ್ ಮಾಡಲಾದ ಟೂಲ್ ಕಿಟ್ ಒಂದನ್ನು ನೀಡಲಾಗಿದೆ” ಎಂದು ಪ್ರತಿಭಟನೆ ಕುರಿತ ದಾಖಲೆಯೊಂದನ್ನು ಶೇರ್ ಮಾಡಿದ್ದರು.

ಗ್ರೆಟಾ ಥಂಬರ್ಗ್ ವಿರುದ್ಧ ಕ್ರಿಮಿನಲ್ ಸಂಚು (ಕಲಂ 120 ಬಿ) ಮತ್ತು ಧರ್ಮ, ಜನಾಂಗಗಳ ಆಧಾರದಲ್ಲಿ ಎರಡು ಭಿನ್ನ ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ(ಕಲಂ153ಎ) ಆಪಾದನೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp