ಬಿಹಾರದ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ: ತೇಜಸ್ವಿ ಯಾದವ್

Prasthutha|

ಪಟ್ನಾ: ಬಿಹಾರದ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಆರ್ ಜೆಡಿ ನಾಯಕ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

- Advertisement -

ಮಾರನ್ ಅವರು ಜಾತಿ ಪದ್ಧತಿಯಿಂದಾಗಿ ತುಂಬಿರುವ ಅನ್ಯಾಯಗಳನ್ನು ಮತ್ತು ಕೆಲವು ಸಮುದಾಯದ ಜನರನ್ನು ಮಾತ್ರ ಇಂತಹ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿರುವುದನ್ನು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದ್ದರೆ ಅದು ಅರ್ಥಪೂರ್ಣ. ಆದರೆ, ಬಿಹಾರ ಮತ್ತು ಉತ್ತರಪ್ರದೇಶದ ಸಂಪೂರ್ಣ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ನಾವು ಡಿಎಂಕೆಯನ್ನು ನಮ್ಮಂತೆಯೇ ಸಾಮಾಜಿಕ ನ್ಯಾಯದ ಆದರ್ಶ ಪಾಲಿಸುವ ಪಕ್ಷವಾಗಿ ನೋಡುತ್ತೇವೆ. ಆ ಪಕ್ಷದ ನಾಯಕರು ಈ ಆದರ್ಶಕ್ಕೆ ವಿರುದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ಯಾದವ್ ಹೇಳಿದ್ದಾರೆ.

Join Whatsapp