ವಿಧಾನಸೌಧದ ಕ್ಯಾಂಟೀನ್ ಗೂ ನುಗ್ಗಿದ ನೀರು

Prasthutha|

ಬೆಂಗಳೂರು: ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿರುವುದಲ್ಲದೆ   ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಪಕ್ಕದಲ್ಲಿರುವ ಕ್ಯಾಂಟೀನ್ ಗೂ ನೀರು ನುಗ್ಗಿದೆ.

- Advertisement -

ಸಿಬ್ಬಂದಿ  ಸೋಮವಾರ ನೀರು ಹೊರಹಾಕಲು ಹರಸಾಹಸ ಮಾಡಿದರು. ಸುಮಾರು ಮೂರು ಅಡಿಗಳಿಗೂ ಹೆಚ್ಚು ನೀರು ನಿಂತಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಪೂರ್ತಿ ಮಳೆ ಸುರಿದಿದ್ದು, ರಸ್ತೆಗಳು ಹೊಳೆಯಂತಾಗಿವೆ. ನೀರು ಹರಿದು ಹೋಗಲು ಜಾಗವಿಲ್ಲದ ಕಾರಣ ಮಳೆ ನಿಂತರೂ ಬಡಾವಣೆಗಳಿಗೆ ನೀರು ನುಗ್ಗುವುದು ನಿಂತಿಲ್ಲ. ಸರಕಾರ, ಬಿಬಿಎಂಪಿ ವಿರುದ್ಧ  ಅಸಮಾಧಾನ ವ್ಯಕ್ತಪಡಿಸುತಿದ್ದು, ವಿಧಾನಸಭೆಯ ಕ್ಯಾಂಟೀನ್ ಪರಿಸ್ಥಿತಿ ಹೀಗಿದ್ದರೆ, ನಾವು ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು? ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

Join Whatsapp