ಅಲ್ ಜಝೀರಾ ವರದಿಗಾರ್ತಿ ಶಿರೀನ್ ಅಬು ಅಕ್ಲೆಹ್ ಆಕಸ್ಮಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ: ತಪ್ಪೊಪ್ಪಿಕೊಂಡ ಇಸ್ರೇಲ್ ಸೇನೆ

Prasthutha|

ಜೆರುಸಲೇಂ: ಫೆಲೆಸ್ತೀನ್-ಅಮೆರಿಕನ್ ಅಲ್ ಜಝೀರಾ ವರದಿಗಾರ್ತಿ ಶಿರೀನ್ ಅಬು ಅಕ್ಲೆಹ್ ಅವರನ್ನು ಉಗ್ರಗಾಮಿ ಎಂದು ತಪ್ಪಾಗಿ ಅರ್ಥೈಸಿಕೊಂಡು ತಮ್ಮ ಸೈನಿಕರು ಗುಂಡಿಕ್ಕಿ ಕೊಂದಿರಬಹುದು ಎಂದು ಇಸ್ರೇಲ್ ಸೇನೆ ಸೋಮವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.

- Advertisement -

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಮಿಲಿಟರಿ ದಾಳಿಗಳನ್ನು ವರದಿ ಮಾಡುವಾಗ ಶಿರೀನ್ ಅಬು ಅಕ್ಲೆಹ್ ಅವರನ್ನು ಮೇ ತಿಂಗಳಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಇಸ್ರೇಲ್ ಕಾರಣ ಎಂದು ಫೆಲೆಸ್ತೀನಿಯರು ಆರೋಪಿಸಿದ್ದರು. ಆರಂಭದಲ್ಲಿ ಇಸ್ರೇಲ್ ಉಗ್ರಗಾಮಿಗಳ ಗುಂಡಿನ ದಾಳಿಯಲ್ಲಿ ಆಕೆ ಮೃತಪಟ್ಟಿರಬಹುದು ಎಂದು ಹೇಳಿತ್ತು, ಆದರೆ ನಂತರ ಗುಂಡಿನ ಚಕಮಕಿಯ ಸಮಯದಲ್ಲಿ ತನ್ನ ಸೈನಿಕರಲ್ಲಿ ಒಬ್ಬರು ಗುಂಡಿಕ್ಕಿ ಕೊಂದಿರಬಹುದು ಎಂದು ಹೇಳಿದೆ.

ಪ್ಯಾಲೆಸ್ತೀನ್-ಅಮೆರಿಕನ್ ಪತ್ರಕರ್ತೆ ಅಬು ಅಕ್ಲೆಹ್, ಎರಡು ದಶಕಗಳ ಕಾಲ ಅಲ್ ಜಝೀರಾ ವಾಹಿನಿಗಾಗಿ ಇಸ್ರೇಲಿ ಮಿಲಿಟರಿ ದಾಳಿಗಳ ಕುರಿತು ವರದಿ ಮಾಡಿದ್ದರು.

Join Whatsapp