ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ: ಬಿಇಒ ಪರಿಶೀಲನೆಗೆ ಆದೇಶಿಸಿದ ಬಿ.ಸಿ.ನಾಗೇಶ್

Prasthutha|

ಬೆಂಗಳೂರು: ನಗರದ ಕ್ಲಾರೆನ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ಇಲಾಖೆಯು ನಿಗಾ ವಹಿಸಿದ್ದು ಎಲ್ಲಾ  ಬಿಇಒಗಳಿಗೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಪರಿಶೀಲನೆ ನಡೆಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ನಾಗೇಶ್, ಶಿಕ್ಷಣ  ಇಲಾಖೆ ಮುಖಾಂತರ ಆ ಶಾಲೆಗೆ ನೋಟೀಸ್ ಜಾರಿ ಮಾಡಲಾಗಿದೆ. ಈ ಶಾಲೆಯು ಕೇಂದ್ರೀಯ ಸಿಲೆಬಸ್ಸಿಗೆ ಒಳಪಟ್ಟಿದ್ದು, ಯಾವುದೇ ಶಾಲೆಯಲ್ಲಿ ಪ್ರತ್ಯೇಕ ಧಾರ್ಮಿಕ ಬೋಧನೆಯು ತಪ್ಪು ಎಂದು ಹೇಳಿದ ಶಿಕ್ಷಣ ಸಚಿವರು, ಇದು ಕರ್ನಾಟಕ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದ್ದು, ಧಾರ್ಮಿಕ ವಿಚಾರದ ಬೋಧನೆ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

ಈ ಹಿಂದೆ ಶಾಲೆಗಳಲ್ಲಿ ಭಗವದ್ಗೀತೆ ಶಿಕ್ಷಣ ಕಡ್ಡಾಯ ಮಾಡಲಾಗುತ್ತದೆ ಎಂದು ಹೇಳುತ್ತಿದ್ದ ಬಿಸಿ ನಾಗೇಶ್ ತಮ್ಮದೇ ಹೇಳಿಕೆಗೆ  ವಿರುಧ್ಧವಾಗಿ ಈಗ ಮಾತಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಸಾಮಾಜಿಕ ವಲಯಗಳಲ್ಲಿ ಕೇಳಿಬರುತ್ತಿದೆ.

Join Whatsapp