ಲಕ್ನೋ: ಹಿಂದೂ ಧರ್ಮಕ್ಕೆ ಮತಾಂತರವಾದ ಬಳಿಕ ವಾಸೀಮ್ ರಿಝ್ವಿ , ಶಿಯಾ ವಕ್ಫ್ ಮಂಡಳಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಶಿಯಾ ವಕ್ಫ್ ಮಂಡಳಿಯ ಸಭೆಗೂ ಮೊದಲು ಅವರು ತಮ್ಮ ರಾಜೀನಾಮೆಯನ್ನು ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ಅಲಿ ಝೈದಿ ಅವರಿಗೆ ಸಲ್ಲಿಸಿದ್ದಾರೆ.
ವಾಸೀಮ್ ರಿಝ್ವಿ ಕಳೆದ ವಾರ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಮತ್ತು ತನ್ನ ಹೆಸರನ್ನು ನಾರಾಯಣ್ ಸಿಂಗ್ ತ್ಯಾಗಿ ಎಂದು ಬದಲಾಯಿಸಿಕೊಂಡಿದ್ದರು.
ಕುರ್ ಆನ್ ನ ಅಧ್ಯಾಯದ ಬಗ್ಗೆ ನ್ಯಾಯಾಲಯಕ್ಕೆ ಹೋದಾಗಲೇ ಶಿಯಾ ಮಂಡಳಿ ರಿಝ್ವಿಯನ್ನು ಉಚ್ಛಾಟನೆ ಮಾಡಬೇಕಾಗಿತ್ತು. ಹಿಂದೂ ಧರ್ಮಕ್ಕೆ ಮತಾಂತರವಾದಾಗಲೂ ಉಚ್ಛಾಟಿಸದೇ ಮಂಡಳಿಯಲ್ಲಿ ಉಳಿಸಿಕೊಂಡಿದ್ದ ಕುರಿತು ಶಿಯಾ ವಕ್ಫ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.