ಟಿಕೆಟ್​ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್​, ಜೆಡಿಎಸ್​ ಮಲತಾಯಿ ಧೋರಣೆ: ವಕ್ಫ್ ಬೋರ್ಡ್

Prasthutha|

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಟಿಕೆಟ್ ಘೋಷಣೆ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ಕರ್ನಾಟಕ ವಕ್ಫ್ ಬೋರ್ಡ್ ಅಸಮಾಧಾನಗೊಂಡಿದೆ.

- Advertisement -

ಬೆಂಗಳೂರಲ್ಲಿ ರಾಜ್ಯ ವರ್ಕ್ಫ್ ಬೋರ್ಡ್ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವರ್ಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸ‌ಅದಿ, ಎರಡು ಪಕ್ಷದ 116 ಸೀಟ್​ಗಳಲ್ಲಿ 11 ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್, ಜೆಡಿಎಸ್​ನ ಈ ಮಲತಾಯಿ ಧೋರಣೆಯನ್ನು ಖಂಡಿಸ್ತೀವಿ ಎಂದು ಹೇಳಿದ್ದಾರೆ.

ಪ್ರಮುಖವಾಗಿ ರಾಜ್ಯದಲ್ಲಿ ಶೇಕಡವಾರು ಅನುಗುಣವಾಗಿ ನೋಡುವುದಾರೇ 116 ಮುಸ್ಲಿಂರಿಗೆ ಟಿಕೆಟ್ ಸಿಗಬೇಕಿತ್ತು. ಆದರೆ ಕೇವಲ 11 ಜನರಿಗೆ ಮಾತ್ರ ಕಾಂಗ್ರೆಸ್​ನಿಂದ ಟಿಕೆಟ್ ಘೋಷಣೆ ಆಗಿದೆ. ಟಿಕೆಟ್ ಮಾತ್ರ ಕೊಡೋದಲ್ಲ, ಆ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಕಾಂಗ್ರೆಸ್, ಜೆಡಿಎಸ್ ಮುಖಂಡರು ಈ ಕೆಲಸ ಮಾಡಬೇಕಿದೆ. 23 ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.

- Advertisement -

ಮುಸ್ಲಿಮರು ಹೆಚ್ಚಾಗಿ ಇರುವ ಕಡೆ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ. ಚಿಕ್ಕಪೇಟೆಯಲ್ಲಿ ನೂರಾರು ಕೋಟಿ ಖರ್ಚು ಮಾಡುತ್ತೇನೆ ಅಂದರೂ ಟಿಕೆಟ್ ಕೊಡುತ್ತಿಲ್ಲ. ಜಾತಿ ನೋಡಿ, ಟಿಕೆಟ್ ಕೊಡುತ್ತಿಲ್ವಾ…? ಎರಡು ಪಕ್ಷಗಳನ್ನು ನಾವು ಟಿಕೆಟ್​ಗಾಗಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇನ್ನು 70 ಟಿಕೆಟ್ ಕಾಂಗ್ರೆಸ್ ಘೋಷಣೆ ಮಾಡುವುದು ಬಾಕಿ‌ ಇದೆ. ಮೂರನೇ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಶಾಫಿ ಸ‌ಅದಿ ಒತ್ತಾಯಿಸಿದರು.



Join Whatsapp