ನವದೆಹಲಿ : ಐಎಎಸ್ ಅಧಿಕಾರಿ ತಮ್ಮ ನಾಯಿಯೊಂದಿಗೆ ವಾಯುವಿಹಾರ ನಡೆಸುವ ಸಲುವಾಗಿ ತ್ಯಾಗರಾಜ ಸ್ಟೇಡಿಯಂ ಅನ್ನು ಕ್ರೀಡಾಪಟುಗಳಿಗೆ ಅವಧಿಗಿಂತ ಮುನ್ನವೇ ಮುಚ್ಚಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.
ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ನಗರದ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸುದ್ದಿ ವರದಿ ಮಾಡಿದ ಗಂಟೆಗಳ ನಂತರ, 1994ರ ಬ್ಯಾಚ್ ನ ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್ ಗೆ ಮತ್ತು ಅವರ ಪತ್ನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ ಎಂದು ಗೃಹ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ಐಎಎಸ್ ಅಧಿಕಾರಿ ಮತ್ತು ಅವರ ಪತ್ನಿ ನಾಯಿಯೊಂದಿಗೆ ನಡೆದಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದ್ದಂತೆ, ದೆಹಲಿಯ ಮುಖ್ಯ ಕಾರ್ಯದರ್ಶಿಯವರ ವರದಿಯ ನಂತರ ಗೃಹ ಸಚಿವಾಲಯ ಅವರ ವಿರುದ್ಧ ಕ್ರಮ ಕೈಗೊಂಡಿದೆ.
ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಮತ್ತು ತರಬೇತುದಾರರು ಸಂಜೆ 7 ಗಂಟೆಗೆ ಐಎಎಸ್ ಅಧಿಕಾರಿ ತನ್ನ ನಾಯಿಯನ್ನು ಅಲ್ಲಿಗೆ ಓಡಿಸಬೇಕಾಗಿರುವುದರಿಂದ ಸಾಮಾನ್ಯಕ್ಕಿಂತ ಮುಂಚಿತವಾಗಿ ತರಬೇತಿಯನ್ನು ಮುಗಿಸಲು ಕೇಳಲಾಯಿತು ಎಂದು ಸುದ್ದಿ ವರದಿಯ ನಂತರ ಖಿರ್ವಾರ್ ವಿವಾದಕ್ಕೊಳಗಾಗಿದ್ದರು.