ಮೊದಲ ಬಾರಿಗೆ ಹಿಂದಿ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಗೆ ಬೂಕರ್ ಪ್ರಶಸ್ತಿ

Prasthutha|

ಲಂಡನ್: ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೆರಿಕದ ಭಾಷಾಂತರಕಾರ ಡೈಸಿ ರಾಕ್ ವೆಲ್ ಅವರ ಜನಪ್ರಿಯ ಹಿಂದಿ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’,  ಭಾರತೀಯ ಭಾಷೆಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ  ಗೆದ್ದ ಮೊದಲ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

- Advertisement -

ಗುರುವಾರ ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ, 63 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಹೊಸದಿಲ್ಲಿಯ ಗೀತಾಂಜಲಿ ಶ್ರೀ ಮತ್ತು ಡೈಸಿ ರಾಕ್ ವೆಲ್ ಹಂಚಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ವೇಳೆ 1947ರಲ್ಲಿ ಭಾರತ ಉಪಖಂಡ ಎದುರಿಸಿದ ಹಿಂಸಾಚಾರದ ವೇಳೆ 80 ವರ್ಷದ ವಿಧವೆಯೊಬ್ಬರು ತೋರಿದ ಕೆಚ್ಚನ್ನು ಈ ಕೃತಿ ಬಿಂಬಿಸಿದೆ. “ಕೆಚ್ಚು, ನಷ್ಟ ಮತ್ತು ಸಾವು ಹೀಗೆ ಇದು ಗಂಭೀರ ವಿಷಯವನ್ನು ಕೈಗೆತ್ತಿಕೊಂಡಿದೆ” ಎಂದು ನಿರ್ಣಾಯಕರು ಬಣ್ಣಿಸಿದ್ದಾರೆ.

- Advertisement -

“ನಾನು ಬೂಕರ್ ನ ಬಗ್ಗೆ ಕನಸು ಕಂಡಿರಲಿಲ್ಲ, ನಾನು ಅದನ್ನು ಮಾಡಬಹುದೆಂದು ಎಂದಿಗೂ ಯೋಚಿಸಲಿಲ್ಲ. ಎಂತಹ ದೊಡ್ಡ ಗುರುತಿಸುವಿಕೆ, ನಾನು ಆಶ್ಚರ್ಯಚಕಿತನಾಗಿದ್ದೇನೆ, ಸಂತೋಷಪಡುತ್ತೇನೆ, ” ಎಂದು ಗೀತಾಂಜಲಿ  ಶ್ರೀ ತಮ್ಮ ಸ್ವೀಕಾರ ಭಾಷಣದಲ್ಲಿ ಹೇಳಿದರು.

Join Whatsapp