ಕೋಲಾರ: ಅಭಿವೃದ್ಧಿ ಮಾಡುವವರಿಗೆ ನಮ್ಮ ಮತ| ಆಣೆ ಪ್ರಮಾಣ ಮಾಡಿದ ಮತದಾರರು

Prasthutha|

- Advertisement -

ಕೋಲಾರ: ಕೋಲಾರವನ್ನು ಅಭಿವೃದ್ಧಿ ಮಾಡದವರು, ರೈತರ ಪರ ನಿಲ್ಲದವರು ಹಾಗೂ ಹೊರಗಿನವರಿಗೆ ಮತ ನೀಡುವುದಿಲ್ಲ ಎಂದು ಮತದಾರರು ಆಣೆ ಪ್ರಮಾಣ ಮಾಡಿದ್ದಾರೆ.

ಕೋಲಾರ ಅಭಿವೃದ್ಧಿ ಮಾಡುವವರಿಗೆ ಮಾತ್ರ ಮತ ಹಾಕುತ್ತೇವೆ, ಸಮಗ್ರ ಅಭಿವೃದ್ಧಿ, ನಿಷ್ಠಾವಂತ ಅಭ್ಯರ್ಥಿಗಳಿಗೆ ಮತ ಹಾಕುತ್ತೇವೆ. ಅಭಿವೃದ್ಧಿ ಮಾಡದ ಮಂತ್ರಿ, ಶಾಸಕರಿಗೆ, ರಸ್ತೆಗಳನ್ನ ಹಳ್ಳಕೊಳ್ಳಗಳನ್ನ ಮಾಡಿರುವ, ರೈತರ ಮೇಲೆ ಗೋಲಿಬಾರ್, ಲಾಠಿ ಚಾರ್ಚ್ ಮಾಡಿರುವ ಸರ್ಕಾರಗಳಿಗೆ ವೋಟ್ ಹಾಕುವುದಿಲ್ಲ ಎಂದು ಮತದಾರರು ಹಾಗೂ ರೈತರು ನಿರ್ಧರಿಸಿದ್ದಾರೆ.

ಅಭಿವೃದ್ಧಿ ಮಾಡದ ರೈತರ ನಿಲುವಿಗೆ ನಿಲ್ಲದ ಹೊರಗಿನವರಿಗೆ ಮಣೆ ಹಾಕುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುತ್ತೇವೆ. ಮಾರಾಟವಾಗುವ, ಪಕ್ಷಾಂತರಿಗಳಿಗೆ ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ. ಈ ಮೂಲಕ ನಾವು ಸತ್ಯವನ್ನೆ ಹೇಳುತ್ತೇವೆ ಈ ಬಾರಿ ರೈತರು, ಸ್ಥಳೀಯರಿಗೆ ಆಧ್ಯತೆ ಕೊಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ.

- Advertisement -