ಏರ್‌ಟೆಲ್ ಬಳಿಕ ವೊಡಾಫೋನ್- ಐಡಿಯಾ ಗ್ರಾಹಕರಿಕೆ ದರ ಏರಿಕೆಯ ಶಾಕ್ !

Prasthutha|

ನವದೆಹಲಿ: ಏರ್’ಟೆಲ್ ಬಳಿಕ ವೊಡಾಫೋನ್- ಐಡಿಯಾ ಸಂಸ್ಥೆಯು ತನ್ನ ಪ್ರಿಪೇಯ್ಡ್ ಸೇವೆಯ ದರಗಳನ್ನು ಹೆಚ್ಚಿಸುವ ನಿರ್ಧಾರ ಮಾಡಿದ್ದು, ನವೆಂಬರ್ 25ರಿಂದಲೇ ಏರಿಕೆಯಾದ ಹೊಸ ದರ ಜಾರಿಗೆ ಬರಲಿದೆ. ನವೆಂಬರ್ 22 ರಂದು ಏರ್‌ಟೆಲ್ ಸಂಸ್ಥೆ ಪ್ರಿಪೇಯ್ಡ್ ಬಳಕೆದಾರರಿಗೆ 20-25 ಪ್ರತಿಶತದಷ್ಟು ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ, ವೊಡಾಫೋನ್ ಐಡಿಯಾ ಕೂಡ ತನ್ನ ನಿರ್ಧಾರ ಪ್ರಕಟಿಸಿದೆ.

- Advertisement -

ವೊಡಾಫೋನ್ ಐಡಿಯಾ ಹೊಸ ದರಗಳ ಪಟ್ಟಿ

ಪ್ರಿಪೇಯ್ಡ್ ಸೇವೆಗಳಲ್ಲಿನ ಪ್ರಸ್ತುತದ ದರದಲ್ಲಿ ಶೇ.20-25ರಷ್ಟು ಟಾರಿಫ್ ಏರಿಕೆಯಾಗಲಿದೆ. ದರ ಏರಿಕೆಯ ನಿರ್ಧಾರದಿಂದಾಗಿ ಪ್ರಸ್ತುತ ಕಂಪನಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಸರಿದೂಗಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp