ರೌಡಿ ಶೀಟರ್ ಜೊತೆ ಸಭೆ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ: ಫೋಟೋ ವೈರಲ್

Prasthutha|

ಶಿರಸಿ:  ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ರೌಡಿಶೀಟರ್ ಫಯಾಝ್ ಚೌಟಿ ತನ್ನ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿರುವ ಫೋಟೋ ವೈರಲ್ ಆಗಿದ್ದು, ಇದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

- Advertisement -

ದರೋಡೆ, ಬ್ಲಾಕ್ ಮೇಲ್, ಹಣ ವಂಚನೆ, ಅಪಹರಣ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣದಲ್ಲಿ ಫಯಾಝ್ ಆರೋಪಿಯಾಗಿದ್ದು,   ಭೂಗತ ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕರೊಂದಿಗೆ ಸಂಪರ್ಕದಲ್ಲಿದ್ದಾನೆ. ಆದರೆ 5  ದಿನಗಳ ಹಿಂದೆ ಗುಪ್ತವಾಗಿ 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಗೇರಿ ಕಚೇರಿಯಲ್ಲಿ ಚುನಾವಣೆ ಸಂಬಂಧ ಚೌಟಿ ಸಭೆ ನಡೆಸಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ.

Join Whatsapp