ಮುರ್ಮು ವಿರುದ್ಧ ಕೀಳುಮಟ್ಟದ ಹೇಳಿಕೆ: NCW ಮುಂ‍ದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದ ವಿಶ್ವೇಶ್ವರ ಭಟ್

Prasthutha|

ರಾಷ್ಟ್ರಪತಿ ಭವನ, ಮಹಿಳಾ ಆಯೋಗದ ಗಮನ ಸೆಳೆದ ಮುಹಮ್ಮದ್ ಮಫಾಝ್ ಟ್ವೀಟ್

- Advertisement -

ನವದೆಹಲಿ: ಕನ್ನಡ ದಿನಪತ್ರಿಕೆ ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ,ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ‘ಕೀಳುಮಟ್ಟದ’ ಹೇಳಿಕೆ ನೀಡಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.

- Advertisement -

ವಿಶ್ವೇಶ್ವರ ಭಟ್ ,ಆಯೋಗದ ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿದರು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಾಧ್ಯಮಗಳಿಗೆ ತಿಳಿಸಿದರು. ಭಾರತದ ರಾಷ್ಟ್ರಪತಿಯನ್ನು ಅವಮಾನಿಸುವ ಯಾವುದೇ ದುರುದ್ದೇಶ ನನಗಿರಲಿಲ್ಲ ಎಂದು ಭಟ್ ಹೇಳಿದ್ದಾರೆ ಎಂದು ಅವರು ಹೇಳಿದರು.

ಅಯೋಗವು ಭಟ್ ರೊಂದಿಗೆ ಲಿಖಿತ ಕ್ಷಮಾಪಣೆ ಪತ್ರವನ್ನು ಬರೆಸಿದ್ದು, ಅದನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದೆ ಎಂದು ಅವರು ಹೇಳಿದರು.

ತಾನು ಜೋರ್ಡಾನ್ ಗೆ ಪ್ರಯಾಣಿಸಿದ್ದೇನೆ ಎಂದು ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಭಟ್, ಆ ದೇಶದ ಹವಾಮಾನವನ್ನು ವಿವರಿಸುವಾಗ ಭಾರತದ ಅಧ್ಯಕ್ಷರ ವಿರುದ್ಧ ಕೀಳುಮಟ್ಟದ ಪದಗಳನ್ನು ಬಳಸಿದ್ದು, ಆ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಮುಹಮ್ಮದ್ ಮಫಾಝ್ ಎಂಬ ವ್ಯಕ್ತಿಯು ಭಟ್ ಅವರು ತಮ್ಮ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಬರೆದ ಲೇಖನದ ಬಗ್ಗೆ ಟ್ವೀಟ್ ಮಾಡಿ ಅಕ್ಟೋಬರ್ 9 ರಂದು ರಾಷ್ಟ್ರಪತಿ ಭವನಕ್ಕೆ ಟ್ಯಾಗ್ ಮಾಡಿದ್ದರು. ರಾಷ್ಟ್ರಪತಿ ಭವನವು ಆ ದೂರನ್ನು ಆಯೋಗಕ್ಕೆ ಕಳುಹಿಸಿತ್ತು.

ಪತ್ರಿಕೆಯಲ್ಲಿ ಪ್ರಕಟವಾದ ರಾಷ್ಟ್ರಪತಿಯ ಕುರಿತ ಅಭಿಪ್ರಾಯದ ತುಣುಕಿನ ಕಾಗದದ ತುಣುಕುಗಳನ್ನು ಪೋಸ್ಟ್ ಮಾಡಿದ ಟ್ವೀಟ್ ಅನ್ನು ಗಮನಿಸಿದ NCW, ಅಧ್ಯಕ್ಷರ ವಿರುದ್ಧ ಕೀಳುಮಟ್ಟದ ಪೋಸ್ಟ್ ಅನ್ನು ಪರಿಗಣಿಸಿ, ದಿನಾಂಕ 26.10.2022 ರಂದು ಮಧ್ಯಾಹ್ನ 12.30 ಕ್ಕೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಆಯೋಗವು ಭಟ್ ರಿಗೆ ನೋಟಿಸ್ ಕಳುಹಿಸಿದೆ.

ಆದಾಗ್ಯೂ, ಭಟ್ ಸಮಯವನ್ನು ಕೋರಿದ್ದು, ನವೆಂಬರ್ 2 ರಂದು NCW ಮುಂದೆ ಹಾಜರಾಗಿ ಬೇಷರತ್ ಕ್ಷಮೆಯಾಚಿಸಿರು.



Join Whatsapp