ಬಾತ್ ರೂಮ್ ನಲ್ಲಿ ಮಹಿಳೆಯ ವಿಡಿಯೋ ರೆಕಾರ್ಡ್: ವಿಶ್ವನಾಥ್’ನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಜನರು

Prasthutha|

ಕಲಬುರಗಿ: ಬಾತ್ ರೂಮ್ ನಲ್ಲಿದ್ದ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸೆಕ್ಯುರಿಟಿ ಗಾರ್ಡ್ ವಿಶ್ವನಾಥ್ ಎಂಬಾತನನ್ನು ಜನರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

- Advertisement -


ಈ ಘಟನೆ ನಗರದ ರಾಮ ಮಂದಿರ ವೃತ್ತದ ಬಳಿಯಿರುವ ಅಪಾರ್ಟ್ ​​ಮೆಂಟ್ ​ನಲ್ಲಿ ನಡೆದಿದೆ.


ಅಪಾರ್ಟ್ ​​ಮೆಂಟ್ ನಲ್ಲಿ ಬಾಡಿಗೆಯಿದ್ದ ಮಹಿಳೆಯ ವಿಡಿಯೋವನ್ನು ಸೆಕ್ಯುರಿಟಿ ಗಾರ್ಡ್ ರೆಕಾರ್ಡ್ ವಿಶ್ವನಾಥ್ ಎಂಬಾತ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ, ತಕ್ಷಣ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಅಪಾರ್ಟ್ ​​ಮೆಂಟ್ ಗೆ ಆಗಮಿಸಿದ ಮಹಿಳೆಯ ಗಂಡ ಸೆಕ್ಯುರಿಟಿ ಗಾರ್ಡ್ ನನ್ನು ಹಿಡಿದು ಥಳಿಸಿದ್ದಾರೆ. ಅಪಾರ್ಟ್ ​​ಮೆಂಟ್ ಅಂಡರ್ ಗ್ರೌಂಡ್ ನಲ್ಲಿರುವ ಕಂಬಕ್ಕೆ ಸೆಕ್ಯುರಿಟಿ ಗಾರ್ಡ್ ವಿಶ್ವನಾಥ್ ನನ್ನು ಕಟ್ಟಿ ಹಾಕಿ ಅಪಾರ್ಟ್ಮೆಂಟ್ನ ನಿವಾಸಿಗಳು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Join Whatsapp