ಭಾರತದ ಪ್ರವಾಸಿಗರಿಗೆ ವೀಸಾರಹಿತ ಇರಾನ್ ಪ್ರವೇಶ

Prasthutha|

ಟೆಹ್ರಾನ್: ಭಾರತದ ಪ್ರವಾಸಿಗರಿಗೆ ವೀಸಾ ಇಲ್ಲದೆ ದೇಶ ಪ್ರವೇಶ ಮಾಡಲು ಇರಾನ್ ಸರಕಾರ ಅವಕಾಶ ನೀಡಿದೆ. ಭಾರತ ಸೇರಿದಂತೆ 33 ದೇಶಗಳ ಪ್ರವಾಸಿಗರು ಇನ್ನು ಮುಂದೆ ಇರಾನ್‌ ಗೆ ಬರಲು ವೀಸಾದ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ. ಪ್ರಪಂಚದಾದ್ಯಂತದ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಇರಾನ್‌ ಗೆ ಪ್ರಯಾಣಿಸುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್ ಸರಕಾರ ಹೇಳಿದೆ.

- Advertisement -

ಇರಾನ್ ವಿಶ್ವದಾದ್ಯಂತ ಜನರಿಗೆ ಬಾಗಿಲು ತೆರೆಯಲು ಮತ್ತು ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಿದ್ಧವಾಗಿದೆ. ಇದರಿಂದ ಅವರು ನಮ್ಮ ದೇಶಕ್ಕೆ ಸುಲಭವಾಗಿ ಭೇಟಿ ನೀಡಬಹುದು ಮತ್ತು ಈ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ಎಂದು ಇರಾನ್ ಪ್ರವಾಸೋದ್ಯಮ ಮತ್ತು ಕರಕುಶಲ ಇಲಾಖೆ ಹೇಳಿದೆ.

32 ದೇಶಗಳ ನಾಗರಿಕರಿಗೆ ವೀಸಾವಿಲ್ಲದೆ ಪ್ರವೇಶಾವಕಾಶ‌ ನೀಡುವುದರೊಂದಿಗೆ 45 ದೇಶಗಳು ಇರಾನ್‌ ಗೆ ವೀಸಾದ ಅಗತ್ಯವಿಲ್ಲದೆ ಭೇಟಿ ನೀಡಲು ಅವಕಾಶ ಪಡೆದಂತಾಗಿದೆ.

Join Whatsapp