ಕಳ್ಳತನ ಒಪ್ಪಿಕೊಳ್ಳುವಂತೆ ಹಿಂಸೆ: ಮಾನವ ಹಕ್ಕುಗಳ ಆಯೋಗಕ್ಕೆ ದೂರು

Prasthutha|

ಬೆಂಗಳೂರು: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದೊಯ್ದ ಪೊಲೀಸರು ಕೃತ್ಯ ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದು ಒಪ್ಪಿಕೊಳ್ಳದಿದ್ದಾಗ ಕೈ-ಕಾಲು ಕಟ್ಟಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

- Advertisement -

ದೇವನಹಳ್ಳಿ ತಾಲೂಕಿನ ಧರ್ಮಪುರದ ಪ್ರಕಾಶ್ (39) ವಿಜಯಪುರ ಪೊಲೀಸರು ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ.

ಕಳೆದ ಡಿ. 11ರ ರಾತ್ರಿ 7ರ ವೇಳೆ  ವಿಜಯಪುರ ಪೊಲೀಸರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ​ನನ್ನು ಕರೆದುಕೊಂಡು ಹೋಗಿದ್ದಾರೆ.

- Advertisement -

ಕಳ್ಳತನ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಠಾಣೆಯ ಸಬ್​​ ಇನ್ಸ್​ ಪೆಕ್ಟರ್​​​ ನಂದೀಶ್ ಮತ್ತು ಪೊಲೀಸ್ ಸಿಬ್ಬಂದಿ ಬಲವಂತ ಮಾಡಿದ್ದಾರೆ. ಪ್ರಕಾಶ್ ಕಳ್ಳತನ ಪ್ರಕರಣ ಒಪ್ಪಿಕೊಳ್ಳದಿದ್ದಾಗ ಆತನ ಕೈ-ಕಾಲು ಕಟ್ಟಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಠಾಣೆಗೆ ಹೋದ ಪ್ರಕಾಶ್ ಅವರ ಪತ್ನಿ, ಮಕ್ಕಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ

ಠಾಣೆಯಿಂದ ಬಿಟ್ಟು ಕಳಿಸುವಾಗ ಹೊಡೆದಿರುವ ವಿಷಯ ಯಾರಿಗಾದರು ಹೇಳಿದರೆ ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವಂತೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕಾಶ್​ ನೋವು ತೋಡಿಕೊಂಡಿದ್ದಾರೆ.

ವಿಜಯಪುರ ಪೊಲೀಸರ ದೌರ್ಜನ್ಯದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಹ ನೀಡಲಾಗಿದೆ.



Join Whatsapp