ಲೈಂಗಿಕ ಕಿರುಕುಳ| ಬಿಜೆಪಿ ಸಚಿವನ ರಾಜೀನಾಮೆ

Prasthutha|

ಪಣಜಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ನಾಯಕ ಮಿಲಿಂದ್ ನಾಯಕ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳ ಕಾರ್ಯಾಲಯ, ನ್ಯಾಯಯುತ ತನಿಖೆಯನ್ನು ಖಾತರಿಪಡಿಸಲು ಸಚಿವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದೆ.

- Advertisement -

ಸಚಿವರು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುವ ಚಿತ್ರಗಳು, ವಿಡಿಯೋಗಳು ಮತ್ತು ವಾಟ್ಸಾಪ್ ಚಾಟ್‌ ದಾಖಲೆಗಳಿವೆ. ಆದ್ದರಿಂದ ಮಿಲಿಂದ್ ಗೆ ಶಾಸಕರಾಗುವ ಅರ್ಹತೆಯೂ ಇಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು.

ಸಚಿವರ ಲೈಂಗಿಕ ದೌರ್ಜನ್ಯಕ್ಕೆ ಸಾಕ್ಷಿಯಾಗಿರುವ ಕೆಲವು ಚಿತ್ರಗಳು ಮತ್ತು ವಾಟ್ಸಾಪ್ ಚಾಟ್‌ಗಳನ್ನು ಸಹ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಮಿಲಿಂದ್ ನಾಯಕ್ ರಾಜೀನಾಮೆ ನೀಡಿದ್ದಾರೆ.

Join Whatsapp