ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದ ಬೆನ್ನಲ್ಲೇ ಹಿಂಸಾಚಾರ ಪೀಡಿತ ರಾಜ್ಯದಿಂದ ಮತ್ತೊಂದು ಆಘಾತಕಾರಿ ವಿಡಿಯೊ ಹೊರಬಿದ್ದಿದೆ.
ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಈ ವಿಡಿಯೊದಲ್ಲಿ ಕುಕಿ ವ್ಯಕ್ತಿಯ ಕತ್ತರಿಸಿದ ತಲೆಯನ್ನು ಬೇಲಿಯ ಮೇಲೆ ಇರಿಸುವುದು ಕಾಣಿಸುತ್ತದೆ. ಈ ವಿಡಿಯೊದಲ್ಲಿರುವ ಸಂತ್ರಸ್ತನನ್ನು ಮಣಿಪುರದ ಬಿಷ್ಣುಪುರ ಜಿಲ್ಲೆಯ ನಿವಾಸಿ ಡೇವಿಡ್ ಥಿಕ್ ಎಂದು ಗುರುತಿಸಲಾಗಿದೆ.
ಮಣಿಪುರದಲ್ಲಿ ಜುಲೈ 2 ರಂದು ಘರ್ಷಣೆ ನಡೆದಿತ್ತು. ಅಂದು ರಾತ್ರಿ ಸತ್ತ ಮೂವರಲ್ಲಿ ಕುಕಿ ವ್ಯಕ್ತಿಯೂ ಇದ್ದಾನೆ. ಅವನ ತಲೆಯನ್ನು ಕತ್ತರಿಸಿ ಬಿದಿರಿನ ಬೇಲಿಯ ಮೇಲೆ ಮೈತಿ ಉಗ್ರರು ಇರಿಸಿದ್ದಾರೆ ಎಂದು ಹೇಳಲಾಗಿದೆ. ಬಿದಿರಿನ ಬೇಲಿಯಲ್ಲಿರುವ ರಕ್ತದ ಕಲೆಯ ಚಿತ್ರವೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.