ಕೊಟ್ಟಿಗೆಯಲ್ಲಿದ್ದ 9 ಕುರಿಗಳ ಕತ್ತು ಕೊಯ್ದು ಕೊಂದು ಹಾಕಿದ ಕಿಡಿಗೇಡಿಗಳು

Prasthutha|

ಚಿಕ್ಕಮಗಳೂರು: ಕೊಟ್ಟಿಗೆಯಲ್ಲಿದ್ದ 9 ಕುರಿಗಳ ಕತ್ತು ಕೊಯ್ದು ಅಮಾನುಷವಾಗಿ ಕೊಂದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಹಗಲು ಹೊತ್ತಿನಲ್ಲೇ 39 ಕುರಿಗಳ ಪೈಕಿ 9 ಕುರಿಗಳ ಕತ್ತನ್ನು ಕೊಯ್ದು, ದುಷ್ಕರ್ಮಿಗಳು 27 ಕುರಿಗಳನ್ನ ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದ ದಿನಕರ್ ಎಂಬುವರಿಗೆ ಸೇರಿದ ಕುರಿಗಳಾಗಿದ್ದು ಕೊಟ್ಟಿಗೆಯ ತುಂಬ ರಕ್ತಸಿಕ್ತ ಕುರಿಗಳನ್ನು ಕಂಡು ಕುರಿಗಾಹಿ ದಿನಕರ್ ಕಂಗಾಲಾಗಿದ್ದಾರೆ. ಇನ್ನಷ್ಟು ಕುರಿಗಳನ್ನು ಕೊಲ್ಲಲು ಮುಂದಾಗಿದ್ದ ದುಷ್ಕರ್ಮಿಗಳು ಮನೆಯ ಸುತ್ತಮುತ್ತ ಇದ್ದ ನಾಯಿಗಳ ಚಿರಾಟದಿಂದ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸದ್ಯ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆಸಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.