ಮಣಿಪುರದಲ್ಲಿ ಮತ್ತೆ ಹಿಂಸಾಚಾರ: 13 ಸಾವು

Prasthutha|

ಮಣಿಪುರ: ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇಂದು ಮಧ್ಯಾಹ್ನ ನಡೆದ ಹಿಂಸಾಚಾರದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.

- Advertisement -

ಮಧ್ಯಾಹ್ನದ ಹೊತ್ತಿಗೆ ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲೈತು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದ ಬಗ್ಗೆ ಮಾಹಿತಿ ಬಂದು ಅಲ್ಲಿಗೆ ಪಡೆಗಳನ್ನು ಕಳಿಸಲಾಯಿತು. ಅವರು ಲೈತು ಗ್ರಾಮದಲ್ಲಿ 13 ಶವಗಳನ್ನು ಕಂಡುಕೊಂಡಿದ್ದಾರೆ. ಶವಗಳ ಪಕ್ಕದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರು ಲೈತು ಪ್ರದೇಶದವರಲ್ಲ ಮತ್ತು ಬೇರೆ ಸ್ಥಳದಿಂದ ಬಂದಿರಬಹುದು ಎಂದು ಅಂದಾಜಿಸಾಗಿದೆ. ಇನ್ನು ಅವರು ಪ್ರತ್ಯೇಕ ಗುಂಪಿನೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.‌ ಪೊಲೀಸರು ಅಥವಾ ಭದ್ರತಾ ಪಡೆಗಳು ಮೃತ ಜನರ ಗುರುತನ್ನ ದೃಢಪಡಿಸಿಲ್ಲ ಎಂದು ತಿಳಿದುಬಂದಿದೆ.

Join Whatsapp