ಸಾಕುತ್ತಿದ್ದ ಬೆಕ್ಕು ಕಚ್ಚಿ ತಂದೆ ಮಗ ಸಾವು!

Prasthutha|

ಉತ್ತರ ಪ್ರದೇಶ: ಮನೆಯಲ್ಲಿ ಸಾಕುತ್ತಿದ್ದ ಬೆಕ್ಕು ಕಚ್ಚಿ ಇಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾಲ್ಪುರದಲ್ಲಿ ನಡೆದಿದೆ. ಸಾಕು ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿದ್ದರ ಪರಿಣಾಮ ಈ ದುರಂತ ಸಂಭವಿಸಿದೆ. ಬೆಕ್ಕಿಗೆ ಹುಚ್ಚುನಾಯಿ ಕಚ್ಚಿದ್ದು, ಬಳಿಕ ಆ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿದೆ. ಇದಾಗಿ ಒಂದು ವಾರದ ನಂತರ ತಂದೆ ಮತ್ತು ಮಗ ರೆಬೀಸ್‌ಗೆ ಗುರಿಯಾಗಿ ಸಾವನ್ನಪ್ಪಿದ್ದಾರೆ.

- Advertisement -

ಕಾನ್ಸುರ ನಗರದ ಅಕ್ಟರ್ ಪುರದಲ್ಲಿರುವ ತಮ್ಮ ಮನೆಯಲ್ಲಿ ಬೆಕ್ಕನ್ನು ತುಂಬಾ ಮುದ್ದಿನಿಂದ ಸಾಕಿದ್ದರು. ಕುಟುಂಬದ ಎಲ್ಲಾ ಸದಸ್ಯರೂ ಕೂಡ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ದುರದೃಷ್ಟವಶಾತ್ ಒಂದು ದಿನ ಅವರ ಮುದ್ದಿನ ಬೆಕ್ಕಿಗೆ ಬೀದಿ ನಾಯಿಯೊಂದು ಕಚ್ಚಿದೆ. ಕಚ್ಚಿದ್ದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್ ಲಕ್ಷಗಳು ಕಾಣಿಸಿಕೊಳ್ಳಲಾರಂಭಿಸಿವೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಮನೆಯವರು ಎಂದಿನಂತೆ ಬೆಕ್ಕಿನ ಜೊತೆ ನಡೆದುಕೊಂಡಿದ್ದಾರೆ. ಒಂದು ದಿನ ಬೆಕ್ಕಿನ ಜೊತೆ ಆಟವಾಡುತ್ತಿರುವಾಗ ಅದು ತನ್ನ ಮಾಲೀಕನ ಮಗನಿಗೆ ಕಚ್ಚಿ ಗಾಯಮಾಡಿದೆ. ಕೆಲ ದಿನಗಳಲ್ಲಿ ಆತನ ಆರೋಗ್ಯ ಹದಗೆಡಲು ಶುರುವಾಗಿ ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿದ್ದಾನೆ. ಕೊನೆಗೆ ಆತ ಮೃತಪಟ್ಟಿದ್ದಾನೆ. ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಗಿದೆ. ಅವರೂ ಕೂಡ ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ.

ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಅವರ ಮನೆಗೆ ಯಾರೂ ಭೇಟಿ ನೀಡುತ್ತಿಲ್ಲ. ಜೊತೆಗೆ ಆ ಪ್ರದೇಶದಲ್ಲಿ ಓಡಾಡೋದಕ್ಕೂ ಅಂಜುತಿದ್ದರು. ಸದ್ಯ ಉಳಿದಿರುವ ಅವರ ಕುಟುಂಬಸ್ಥರನ್ನು ಕಾನ್ಸುರಕ್ಕೆ ಕಳುಹಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹಿರಿಯ ವೈದ್ಯಾಧಿಕಾರಿ ಅಮಿತ್ ಕಟಿಯಾರ್ ಹೇಳಿದ್ದಾರೆ. ನಾವು ಸಾಕುವ ಪ್ರಾಣಿಗಳಿಗೆ ಆಂಟಿ ರೇಬಿಸ್ ಇಂಜೆಕ್ಷನ್‌ಗಳನ್ನು ಹಾಕಿಸಲೇಬೇಕು. ಸಾಕು ಪ್ರಾಣಿಗಳು ಮನೆಯ ಸದಸ್ಯರಿಗೆ ಕಚ್ಚಿದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Join Whatsapp