ಸಾಮಾಜಿಕ ಜಾಲ ತಾಣದ ನಿಯಮ ಉಲ್ಲಂಘನೆ; 16 ಲಕ್ಷ ವಾಟ್ಸ್ ಆ್ಯಪ್ ಖಾತೆಗಳು ಬಂದ್ !

Prasthutha|

ಹೊಸದಿಲ್ಲಿ: ಸಾಮಾಜಿಕ ಜಾಲ ತಾಣದ ನೀತಿಗಳನ್ನು ಉಲ್ಲಂಘಿಸಿ, ಆಕ್ಷೇಪಾರ್ಹ ಸಂದೇಶ ಕಳಿಸಿದ ಖಾತೆದಾರರ ವಿರುದ್ಧ ಬಂದಿದ್ದ ದೂರುಗಳನ್ನು ಮೆಟಾ ಒಡೆತನದ ವಾಟ್ಸ್ ಆ್ಯಪ್ ಕಂಪನಿಯು ಗಂಭೀರವಾಗಿ ಪರಿಗಣಿಸಿದೆ.  ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಪ್ರಿಲ್  ತಿಂಗಳಲ್ಲಿ 16 ಲಕ್ಷಕ್ಕೂ ಅಧಿಕ ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ.

- Advertisement -

ತನ್ನ ಬಳಕೆದಾರರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಾ ಬಂದಿರುವ  ವಾಟ್ ಆ್ಯಪ್, ಇನ್ನೊಂದು ಕಡೆ ಬಳಕೆದಾರರು ನೀಡುವ ದೂರುಗಳನ್ನೂ ಪರಿಗಣಿಸಿ ಕಳೆದ ಫೆಬ್ರವರಿಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಖಾತೆಗಳನ್ನು ವಾಟ್ ಆ್ಯಪ್ ರದ್ದು ಮಾಡಿತ್ತು. ಮಾಚ್ ೯ನಲ್ಲಿ ನಿಷೇಧಿತ ಖಾತೆಗಳ ಸಂಖ್ಯೆ ಇನ್ನೂ ವೃದ್ಧಿಯಾಗಿದ್ದು, ಐಟಿ ನಿಯಮಗಳಿಗೆ ಅನುಸಾರವಾಗಿ ಆಕೌಂಟ್‌ ಗಳನ್ನು ನಿಷೇಧಿಸಲಾಗುತ್ತಿದೆ.

ಈ ತನಕ 20,69,000 ಕ್ಕೂ ಅಧಿಕ ಭಾರತೀಯರ ವಾಟ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದ್ದು, ಬಳಕೆದಾರರು ಮಾಡುವ ರಿಪೋರ್ಟ್, ಆಧಾರದ ಮೇಲೆ ಕೂಡ ಅನೇಕ ಖಾತೆಗಳನ್ನು ಬಂದ್ ಮಾಡಲಾಗಿದೆ. ದೇಶದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ಬಳಿಕ ಪ್ರತಿ ತಿಂಗಳೂ ದೂರುಗಳಿಗೆ ಸಂಬಂಧಿಸಿದ ವರದಿಯನ್ನು ಕಂಪನಿಯು ಕಡ್ಡಾಯವಾಗಿ ಪ್ರಕಟಿಸಬೇಕಾಗಿದೆ.

- Advertisement -

ವಾಟ್ಸ್ ಆ್ಯಪ್ ಖಾತೆದಾರ ಇತರ ಬಳಕೆದಾರರನ್ನು ವಂಚಿಸಿದರೆ ಹಾಗೂ ಆಶ್ಲೀಲ, ಮಾನಹಾನಿಕರ, ಬೆದರಿಕೆ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ಖಾತೆಯು ಬ್ಯಾನ್ ಆಗುತ್ತದೆ. ಕಾನೂನುಬಾಹಿರ ಚಟುವಟಿಕೆ, ಹಿಂಸಾತ್ಮಕ ಅಪರಾಧಗಳ ಪ್ರಚೋದನೆಗಳಿಗೆ ಬಳಸಿದರೂ  ಇದೇ ಕ್ರಮ ಅನ್ವಯವಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಸದಾ ನಿಗಾವಹಿಸುತ್ತಿರುವ ಡೇಟಾ ವಿಜ್ಞಾನಿಗಳು, ತಜ್ಞರು  ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ದೂರುಗಳನ್ನು ಮತ್ತು ಖಾತೆದಾರರ ಅಪರಾಧವನ್ನು ಪತ್ತೆ ಮಾಡುತ್ತಾರೆ.

Join Whatsapp