ಟೈಪಿಂಗ್ ಮಾಡಿ 9 ಗಿನ್ನೆಸ್ ದಾಖಲೆ ನಿರ್ಮಿಸಿದ ವಿನೋದ್​ ಕುಮಾರ್​ ಚೌಧರಿ

Prasthutha|

ಹೊಸದಿಲ್ಲಿ: ಜವಾಹರ್ ​ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಆಪರೇಟರ್​ ಆಗಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ಚೌದರಿ ಕಂಪ್ಯೂಟರ್ ಟೈಪಿಂಗ್ ಮಾಡಿ ವಿಶಿಷ್ಟ ಸಾಧನೆ ಮಾಡುವ ಮೂಲಕ 9 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

- Advertisement -

41 ವರ್ಷದ ವಿನೋದ್​ ಕುಮಾರ್​ ಚೌಧರಿ 2014ರಲ್ಲಿ ಮೂಗಿನಲ್ಲಿ ಅತಿ ವೇಗದಲ್ಲಿ ಕಣ್ಣು ಮುಚ್ಚಿಕೊಂಡು ಟೈಪ್​ ಮಾಡುವ ಮೂಲಕ ದಾಖಲೆ ಸೃಷ್ಠಿಸಿದ್ದರು. ಬಾಯಿಯಲ್ಲಿ ಕೋಲು ಹಿಡಿದು ಟೈಪಿಂಗ್​ ಮಾಡುವುದು, ಕಣ್ಮುಚ್ಚಿಕೊಂಡು ವೇಗವಾಗಿ ಟೈಪಿಂಗ್​ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿನೋದ್​ ಕುಮಾರ್​ ಚೌಧರಿ, ‘ಬಾಲ್ಯದಲ್ಲಿರುವಾಗ ನನಗೆ ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ನಂತರ ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಕ್ರೀಡೆಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆ ಬಳಿಕ, 2014ರ ಸಮಯದಲ್ಲಿ ನನ್ನ ಮೂಗಿನ ಸಹಾಯದಿಂದ 46.30 ಸೆಕೆಂಡುಗಳಲ್ಲಿ 103 ಅಕ್ಷರಗಳನ್ನು ಟೈಪ್​ ಮಾಡುವ ಮೂಲಕ ಮೊದಲ ದಾಖಲೆಯನ್ನು ಸೃಷ್ಟಿಸಿದೆ. ಇದು ನನ್ನ ಉತ್ಸುಕತೆಯನ್ನು ಹೆಚ್ಚಿಸಿತು. ಆ ಬಳಿಕ ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದೆ. 2016ರಲ್ಲಿ ನಾನು ಎರಡು ಹೊಸ ದಾಖಲೆಗಳನ್ನು ಮಾಡಿದೆ. 2016ರಲ್ಲಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು 6.09 ಸೆಕೆಂಡುಗಳಲ್ಲಿ ಎಲ್ಲಾ ವರ್ಣಾಕ್ಷರಗಳನ್ನು ಅತಿ ವೇಗದಲ್ಲಿ ಟೈಪ್ ಮಾಡಿ ದಾಖಲೆ ಬರೆದೆ’ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

- Advertisement -

ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೌಧರಿ, 2017 ರಲ್ಲಿ ಬಾಯಿಯಲ್ಲಿ ಕೋಲು ಹಿಡಿದು ಎಲ್ಲಾ ಅಕ್ಷರಗಳನ್ನು 18.65 ಸೆಕೆಂಡುಗಳಲ್ಲಿ ಟೈಪ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇದೇ ಸಾಧನೆಯನ್ನು 17.69 ಸೆಕೆಂಡುಗಳಲ್ಲಿ ಮತ್ತು ನಂತರ 2019 ರಲ್ಲಿ 17.01 ಸೆಕೆಂಡುಗಳಲ್ಲಿ ಸಾಧಿಸುವ ಮೂಲಕ ಅವರು 2018 ರಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2019 ರಲ್ಲಿ, ಚೌಧರಿ ಒಂದು ಬೆರಳಿನಿಂದ ವೇಗವಾಗಿ ಟೈಪ್ ಮಾಡಿ ಅಂದರೆ ಎಲ್ಲಾ ವರ್ಣಮಾಲೆಗಳನ್ನು ಕೇವಲ 29.53 ಸೆಕೆಂಡುಗಳಲ್ಲಿ ಟೈಪ್ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು.

Join Whatsapp