ಒಂದೇ ದಿನ ಎರಡು ಕ್ರಿಕೆಟ್ ದಿಗ್ಗಜರ ವಿದಾಯ

Prasthutha|

ಹಿರಿಯ ಮಧ್ಯಮ ವೇಗಿ ಆರ್ ವಿನಯ್ ಕುಮಾರ್ ಅವರು ಶುಕ್ರವಾರ ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ ಮತ್ತು  ಭಾರತದ ಮಾಜಿ ಆಲ್ ರೌಂಡರ್ ಯೂಸುಫ್ ಪಠಾಣ್ ಕೂಡಾ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

- Advertisement -

37 ರ ಹರೆಯದ ವಿನಯ್ ಕುಮಾರ್  “ಇಂದು ‘ದಾವಣಗೆರೆ ಎಕ್ಸ್ ಪ್ರೆಸ್’ 25 ವರ್ಷಗಳ ಕಾಲ ಓಡಿ ಕ್ರಿಕೆಟಿಂಗ್ ಜೀವನದ ಹಲವು ಕೇಂದ್ರಗಳನ್ನು ದಾಟಿದ ನಂತರ ಅಂತಿಮವಾಗಿ ‘ನಿವೃತ್ತಿ’ ಎಂಬ ನಿಲ್ದಾಣಕ್ಕೆ ಬಂದಿದೆ. ಸಾಕಷ್ಟು ಮಿಶ್ರ ಭಾವನೆಗಳೊಂದಿಗೆ ನಾನು ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟಿನಿಂದ ನಿವೃತ್ತಿ ಹೊಂದಿದ್ದೇನೆ “ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದೇ ವೇಳೆ ನಿವೃತ್ತಿ ಬಗ್ಗೆ ಟ್ವೀಟ್ ಮಾಡಿದ ಯೂಸುಫ್ ಪಠಾಣ್ ‘ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ತಂಡಗಳು, ತರಬೇತುದಾರರು ಮತ್ತು ಇಡೀ ದೇಶಕ್ಕೆ ಸಂಪೂರ್ಣ ವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಎರಡು ಕಿಕೆಟ್ ದಿಗ್ಗಜರು ನಿವೃತ್ತಿ ಘೋಷಿಸಿದ್ದಾರೆ.

- Advertisement -