ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ | ಮತದಾನ ದಿನಾಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ…

Prasthutha|

ನವದೆಹಲಿ : ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಮುಖ್ಯ ಚುನಾವನಾ ಆಯುಕ್ತರು ಇಂದು ಘೋಷಿಸಿದರು. ಸಿಇಸಿ ಸುನೀಲ್ ಅರೋರಾ ಸುದ್ದಿಗೋಷ್ಠಿ ನಡೆಸಿ, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಮತ್ತು ಉಪಚುನಾವಣೆಗಳ ದಿನಾಂಕವನ್ನು ಘೋಷಿಸಿದರು.

ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಅಸ್ಸಾಂನಲ್ಲಿ 16 ಮತ್ತು ಪುದುಚೇರಿಯಲ್ಲಿ 33 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

- Advertisement -

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ ಮೂರು ಹಂತದ ಮತದಾನ ನಡೆಯಲಿದೆ. ಉಳಿದಂತೆ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಈ ಎಲ್ಲಾ ಚುನಾವಣೆಗಳ ಫಲಿತಾಂ ಮೇ 6ರಂದು ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ಚುನಾವಣೆ ನಡೆಯಲಿದ್ದು, ಮೊದಲನೇ ಹಂತದ ಮತದಾನ ಮಾ.27, ಎರನೇ ಹಂತದ ಮತದಾನ ಏ.1, ಮೂರನೇ ಹಂತದ ಮತದಾನ ಏ.6, ನಾಲ್ಕನೇ ಹಂತದ ಮತದಾನ ಏ.10, ಐದನೇ ಹಂತದ ಮತದಾನ ಏ. 17, ಆರನೇ ಹಂತದ ಮತದಾನ ಏ. ಏಳನೇ ಹಂತದ ಮತದಾನ ಏ.26, ಎಂಟನೇ ಹಂತದ ಮತದಾನ ಏ.29 ದಲ್ಲಿ ನಡೆಯಲಿದೆ.

ತಮಿಳುನಾಡು ವಿಧಾನಸಭೆಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮಾ.12ರಂದು ಅಧಿಸೂಚನೆ ಜಾರಿಯಾಗಲಿದ್ದು, ಮಾ.19 ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಲಿದೆ. ಏ.6ರಂದು ಮತದಾನ ನಡೆಯುತ್ತದೆ.

ಕೇರಳ ವಿಧಾನಸಭೆಗೂ ಒಂದೇ ಹಂತದ ಮತದಾನ ನಡೆಯಲಿದೆ

ಪುದುಚೇರಿಯಲ್ಲೂ ಒಂದೇ ಹಂತದ ಮತದಾನ ನಡೆಯಲಿದೆ. ಮಾ.12ರಂದು ಅಧಿಸೂಚನೆ ಜಾರಿಯಾಗಲಿದ್ದು, ಮಾ.19ರಂದು ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಲಿದೆ. ಏ.6ರಂದು ಮತದಾನ ನಡೆಯಲಿದೆ.

ಅಸ್ಸಾಂನಲ್ಲಿ ಮೂರು ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಮಾ. 27, ಎರಡನೇ ಹಂತದ ಮತದಾನ .1 ಮತ್ತು ಮೂರನೇ ಹಂತದ ಮತದಾನ ಏ.6ರಂದು ನಡೆಯಲಿದೆ.  

ಕೊರೊನ ಸಂಕಷ್ಟ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಡೆಪಾಸಿಟ್ ಹಣವನ್ನು ಅಭ್ಯರ್ಥಿಗಳು ಆನ್ ಲೈನ್ ನಲ್ಲೇ ಪಾವತಿಸಬಹುದು. ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಜೊತೆ ಇಬ್ಬರು ಮಾತ್ರ ಇರಬಹುದಾಗಿದೆ. ಅಭ್ಯರ್ಥಿಗಳ ಬೆಂಬಲಿಗರು ಗುಂಪುಗೂಡುವುದಕ್ಕೆ ನಿಷೇಧ ಹೇರಲಾಗಿದೆ. ರೋಡ್ ಶೋನಲ್ಲಿ ಕೇವಲ 5 ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಮನೆಮನೆ ಪ್ರಚಾರಕ್ಕೆ ಐವರಿಗೆ ಮಾತ್ರ ಅವಕಾಶವಿರುತ್ತದೆ.

ಸೋಂಕಿತರಿಗೆ ಮತದಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಂದು ಗಂಟೆ ಹೆಚ್ಚುವರಿ ಅವಧಿ ಮತದಾನಕ್ಕೆ ನೀಡಲಾಗುತ್ತದೆ. ಆನ್ ಲೈನ್ ನಲ್ಲೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ.

- Advertisement -