ವಕೀಲನ ಅಪಹರಣಗೈದ ಖಳನಟರ ಬಂಧನ

Prasthutha|

ಬೆಂಗಳೂರು: ಕನ್ನಡ ಸಿನೆಮಾದ ಖಳನಟರು ನಿಜವಾಗಲೂ ಖಳರಾದ ಸುದ್ದಿ ಇದು. ಸಿನೆಮಾ‌ ಸ್ಟೈಲ್ ನಲ್ಲಿ ಸ್ಯಾಂಡಲ್ ಹುಡ್ ಖಳನಟರು ನಿಜವಾದ ಅಪಹರಣ ಕೃತ್ಯವೆಸಗಿದ್ದಾರೆ. 10 ಲಕ್ಷ ರೂಪಾಯಿಗೆ ವಕೀಲರನ್ನೇ ಕಿಡ್ನಾಪ್ ಮಾಡಿದ ಖಳನಟರು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ.

- Advertisement -

 ನಾಗರಭಾವಿಯ‌ ಸ್ವಾತಿ ಹೋಟೆಲ್ ಬಳಿ ಅ. 20ರಂದು ವಕೀಲ‌ ಅಭಯ್ ರವೀಂದ್ರ ಕುಲಕರ್ಣಿ ಕಿಡ್ನಾಪ್ ಆಗಿತ್ತು. ಆದರೆ ಕಿಡ್ನಾಪ್ ಆದ 12 ಗಂಟೆಯೊಳೆಗೆ ಆರೋಪಿಗಳ ಹೆಡೆಮುರಿಯನ್ನು ಇನ್ಸ್ಪೆಕ್ಟರ್ ಲೋಹಿತ್ ಅಂಡ್ ಟೀಂ ಕಟ್ಟಿದೆ. ಉದ್ಯಮಿ ಜತೆ ಸೇರಿ ಸಿನೆಮಾ‌ ಸ್ಟೈಲ್ನಲ್ಲಿ ಎರಡು ಫಾರ್ಚ್ಯೂನರ್ ಕಾರಿನಲ್ಲಿ ರವೀಂದ್ರ ಕುಲಕರ್ಣಿಯವರನ್ನು ಕಿಡ್ನಾಪ್ ಮಾಡಲಾಗಿತ್ತು. ರವೀಂದ್ರ ಕುಲಕರ್ಣಿ ವಕೀಲರಾಗಿದ್ದು, ಖಾಸಗಿ ಕಂಪನಿಯ ಕಾನೂನು ಸಲಹೆಗಾರರಾಗಿದ್ದಾರೆ. ಅದೇ ಕಂಪನಿಯಲ್ಲಿ ಅಂದ್ರಹಳ್ಳಿಯ ಉದ್ಯಮಿ ಸಿದ್ದೇಶ್ ಎಂಬವರು ರವೀಂದ್ರ ಮೂಲಕ ಮಾತುಕತೆ ನಡೆಸಿ ಹಣ ಹೂಡಿಕೆ ಮಾಡಿದ್ದರು.

ಬೇಸಿಕ್ ಚಾರ್ಜಸ್ ಎಂದು ಸಿದ್ದೇಶ್ನಿಂದ ರವೀಂದ್ರ ಅವರು 6-7 ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ. ಆ ಹಣ ವಾಪಸ್ ಪಡೆಯಲು  ಸಿದ್ದೇಶ್ ವಕೀಲರ ದುಂಬಾಲು ಬಿದ್ದಿದ್ದರು. ಹಣವನ್ನು ಕೊಡದೇ ಹೋದಾಗ ಉದ್ಯಮಿ ಸಿದ್ದೇಶ್ ಕಿಡ್ನಾಪ್ ಪ್ಲಾನ್ ಮಾಡಿದ್ದರು. ಕಿಡ್ನಾಪ್ ಪ್ಲಾನ್ಗೆ ಖಳ ನಟರು ಅಥವಾ ಸಾಹಸ ಕಲಾವಿದರು ಸಾತ್ ಕೊಟ್ಟಿದ್ದಾರೆ. ಕಲಾವಿದರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್  ಎಂಬವರು ರವೀಂದ್ರರ ಕಿಡ್ನಾಪ್ ಮಾಡಿದ್ದಾರೆ.  ಸಂಜಯ್ ‘ಭರ್ಜರಿ” ಸೇರಿದಂತೆ‌ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾನೆ.

- Advertisement -

ಕಿಡ್ನಾಪ್ ಮಾಡಿ ಅಂದ್ರಹಳ್ಳಿಯ ಆಫೀಸ್ನಲ್ಲಿಟ್ಟು ರವೀಂದ್ರಗೆ ಹಲ್ಲೆ ಮಾಡಿರುವ ಆರೋಪವೂ ಇದೆ. ಅಪಹರಣಗಾರರು  ರವೀಂದ್ರರವರ ಮನೆಯವರಿಗೆ ಕಾಲ್ ಮಾಡಿ 10 ಲಕ್ಷ ರೂಪಾಯಿ ತರುವಂತೆ ಬೇಡಿಕೆ ಇಟ್ಟಿದ್ದಾರೆ. ರವೀಂದ್ರರವರ ಮೊಬೈಲ್ನಿಂದ ಲೊಕೇಷನ್ ಕಳುಹಿಸಿದ್ದಾರೆ. ಅದುವೇ ಕಿಡ್ನಾಪರ್ಸ್ಗಳಿಗೆ ತಿರುಗುಬಾಣವಾಗಿದೆ. ಲೊಕೇಷನ್ ಹಿಡಿದು ಹೋದ ಪೊಲೀಸರು 9 ಆರೋಪಿಗಳನ್ನು  ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಕ್ಕೆ ಜನರು ಪ್ರಶಂಸಿದ್ದಾರೆ.



Join Whatsapp