ಪೊಲೀಸರಿಂದ ವ್ಯಕ್ತಿಗೆ ಥಳಿತ | ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

Prasthutha|

ಬಲ್ಲಿಯಾ (ಉ.ಪ್ರ.) : ಪೊಲೀಸರು ವ್ಯಕ್ತಿಯೊಬ್ಬರಿಗೆ ಥಳಿಸಿದುದಕ್ಕೆ ಆಕ್ರೋಶಿತರಾದ ಸ್ಥಳೀಯರು ಹಿಂಸಾಚಾರಕ್ಕಿಳಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಹಿರಿಯ ಪೊಲೀಸ್ ಅಧಿಕಾರಿ ಸಹಿತ ಆರು ಮಂದಿ ಪೊಲೀಸರು ಸೇರಿ ಒಟ್ಟು 12 ಮಂದಿಗೆ ಗಾಯಗಳಾಗಿವೆ.

- Advertisement -

ಪ್ರತಿಭಟನಕಾರರು ಬಲ್ಲಿಯಾ-ಲಖನೌ ಹೆದ್ದಾರಿಯನ್ನು ತಡೆ ಹಿಡಿದಿದ್ದಾರೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಯತ್ನಿಸಿದ್ದು, ಅವರ ಮೇಲೆ ಸ್ಥಳೀಯರು ಕಲ್ಲುಗಳನ್ನೆಸೆದಿದ್ದಾರೆ ಮತ್ತು ಸ್ಥಳೀಯ ತಾತ್ಕಾಲಿಕ ಪೊಲೀಸ್ ಪೋಸ್ಟ್ ಅನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಆರು ವಾಹನಗಳಿಗೆ ಹಾನಿ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪತ್ರಕರ್ತರಿಗೂ ಗಾಯಗಳಾಗಿವೆ. ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಪನ್ನಾಲಾಲ್ ಎಂಬಾತನಿಗೆ ಪೊಲೀಸರು ಥಳಿಸಿದ್ದಾರೆ ಎಂದು ಆಪಾದಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಪಡೆಯಲು ಗ್ರಾಮಸ್ಥರು ಒಪ್ಪಿದ್ದಾರೆ. ಆದರೆ, ರಸ್ತೆ ತಡೆಗೆ ಹಾಕಿರುವುದನ್ನು ಪೊಲೀಸರು ತೆಗೆಯಲು ಮುಂದಾದಾಗ ಕೆಲವು ಗ್ರಾಮಸ್ಥರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ವರದಿಯೊಂದು ತಿಳಿಸಿದೆ.

- Advertisement -

ಫೋಟೊ ಕೃಪೆ : ದ ಇಂಡಿಯನ್ ಎಕ್ಸ್ ಪ್ರೆಸ್ (Twitter/@alok_pandey)



Join Whatsapp