‘ರಾಜಕೀಯ ಆಡದೆ ಕೆಲಸ ಮಾಡಿ’ | ಮೋದಿಗೆ ಹಳೆಯ ಟ್ವೀಟ್‌ ಉಲ್ಲೇಖಿಸಿ ಕುಟುಕಿದ ಚಿದಂಬರಂ

Prasthutha|

‘ದೇಶದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಣ್ಣತನದ ರಾಜಕೀಯ ಮಾಡದೆ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ಮೋದಿಯದ್ದೇ ಹಳೆಯ ಟ್ವೀಟ್ ಒಂದನ್ನು ಉಲ್ಲೇಖಿಸಿ ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಕುಟುಕಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮೋದಿಯವರು ತನ್ನನ್ನು ಉದ್ದೇಶಿಸಿ ಮಾಡಿದ್ದ  ಟ್ವೀಟನ್ನು ಚಿದಂಬರಂ ಮತ್ತೆ ಉಲ್ಲೇಖಿಸುತ್ತಾ, ‘ಈಗ ನಾನಿದನ್ನೇ ಹೇಳಬೇಕಾಗುತ್ತದೆ’ ಎಂದು ಮರು ಟ್ವೀಟ್ ಮಾಡಿದ್ದಾರೆ.

‘ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಯುವಕರಿಗೆ ಉದ್ಯೋಗದ ಅಗತ್ಯವಿದೆ. ರಾಜಕೀಯದ ಆಟ ಆಡಿ ಸಮಯವನ್ನು ವ್ಯರ್ಥ ಮಾಡುವ ಬದಲು ಆರ್ಥಿಕತೆಯನ್ನು ಸುಧಾರಿಸಲು ಪ್ರಯತ್ನಿಸಿ’ ಎಂದಾಗಿತ್ತು ಮೋದಿಯವರ ಟ್ವೀಟ್. ಅದು 2013 ರ ಯುಪಿಎ ಸರ್ಕಾರದ ಅವಧಿಯಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಮೋದಿಯವರು ಹಂಚಿದ  ಟ್ವೀಟ್ ಆಗಿತ್ತು. ‘ಇದೇ ವಿಷಯವಾಗಿದೆ ನನಗೂ ಹೇಳಲಿಕ್ಕಿರುವುದು’ ಎಂಬ ಕಮೆಂಟ್‌ನೊಂದಿಗೆ ಚಿದಂಬರಂ ಅವರು ಟ್ವೀಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ.

- Advertisement -

ಈ ಹಿಂದೆ ಚಿದಂಬರಂ ಅವರು ಕೇಂದ್ರ ಸರ್ಕಾರದ ಪರಿಹಾರ ಪ್ಯಾಕೇಜ್ ದೊಡ್ಡ ತಮಾಷೆ ಎಂದು ಆರೋಪಿಸಿದ್ದರು. ಏಪ್ರಿಲ್-ಜೂನ್ ಅವಧಿಯಲ್ಲಿ GDP -23.9ಕ್ಕೆ  ಇಳಿದಿದೆ ಎಂದು ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ಟೀಕಿಸಿದೆ.

- Advertisement -