ವಿಜಯೇಂದ್ರ ಆಯ್ಕೆ; ನಮ್ಮ ರಣನೀತಿ ನಾವು ರೂಪಿಸುತ್ತೇವೆ: ಸಚಿವ ಡಾ. ಜಿ. ಪರಮೇಶ್ವರ್

Prasthutha|

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಗೆ ತಕ್ಕಂತೆ ನಾವು ರಣ ನೀತಿ ರೂಪಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

- Advertisement -


ಸದಾಶಿವ ನಗರದಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ”ನಾವು ತಪ್ಪು ಮಾಡಿದ್ರೆ ಎತ್ತಿ ಹಿಡಿಯಲಿ. ಕ್ಷುಲ್ಲಕ ವಿಚಾರದ ಬಗ್ಗೆ ಮಾತನಾಡಿದ್ರೆ ಒಪ್ಪಲ್ಲ. ಒಳ್ಳೆಯ ರಾಜಕಾರಣದ ವ್ಯವಸ್ಥೆ ಮಾಡಿಕೊಡಬೇಕು. ಆಗ ರಾಜ್ಯದಲ್ಲಿ ಅವರಿಗೆ ಒಳ್ಳೆಯದಾಗುತ್ತದೆ. ನಾನು ಅದನ್ನು ನಿರೀಕ್ಷೆ ಮಾಡುತ್ತೇನೆ. ಮುಂದೆ ನೋಡೋಣ ಹೇಗೆ ಆಗುತ್ತೆ” ಎಂದು ತಿಳಿಸಿದರು.


ಲಿಂಗಾಯತರು ವಿಜಯೇಂದ್ರ ಬೆನ್ನಿಗೆ ನಿಲ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ”ಬೆಳವಣಿಗೆ ಯಾವ ರೀತಿ ಆಗುತ್ತೆ ಎಂದು ನೋಡಬೇಕು. ಅದಕ್ಕೆ ಪ್ರತಿಯಾಗಿ ನಾವು ಮಾಡಬೇಕಲ್ವಾ? ಕಾದು ನೋಡುತ್ತೇವೆ, ಸೂಕ್ಷ್ಮವಾಗಿ ಗಮಿಸುತ್ತೇವೆ. ಆ ನಂತರ ನಮ್ಮ ರಣ ನೀತಿ ನಾವು ರೂಪಿಸುತ್ತೇವೆ” ಎಂದರು



Join Whatsapp