ತೆಲುಗಿನ ಹಿರಿಯ ನಟ ಚಂದ್ರಮೋಹನ್ ನಿಧನ

Prasthutha|

ಬೆಂಗಳೂರು: ತೆಲುಗಿನ ಹಿರಿಯ ನಟ ಚಂದ್ರಮೋಹನ್ (82) ಅವರು ಶನಿವಾರ ನಿಧನರಾಗಿದ್ದಾರೆ.

- Advertisement -


ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು.


ಅವರು ಪತ್ನಿ ಜಲಂಧರಾ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ. ವಿವಿಧ ಪಾತ್ರಗಳ ಮೂಲಕ ತೆರೆ ಮೇಲೆ ಜನರನ್ನು ರಂಜಿಸಿದ್ದ ಚಂದ್ರಮೋಹನ್ ಅವರು ನಾಯಕನ ಪಾತ್ರದ ಜತೆಗೆ ಹಾಸ್ಯ ಹಾಗೂ ಪೋಷಕ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು.

Join Whatsapp