ಕೋರ್ಟ್ ತೀರ್ಪಿನ ದಿನವೇ ವಿಘ್ನೇಶ್ ನಾಯಕ್ ಮೃತದೇಹ ಪತ್ತೆ

Prasthutha|

ಮಂಗಳೂರು : ನಗರದ ವಿ.ಟಿ. ರೋಡ್ ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ (29) ಎಂಬಾತ ಅಪಾರ್ಟ್ ಮೆಂಟ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹ ಪತ್ತೆಯಾಗಿದೆ. ಆದರೆ, ವಿಘ್ನೇಶ್ ಆತ್ಮಹತ್ಯೆ ಕುರಿತಂತೆ ಕೆಲವೊಂದು ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂಬ ಆಗ್ರಹಗಳು ಕೇಳಿಬಂದಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -

2016ರಲ್ಲಿ ರಾಜ್ಯಾದ್ಯಂತ ಭಾರೀ ಚರ್ಚೆಯಾಗಿದ್ದ ಆರ್ ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಹತ್ಯೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಘ್ನೇಶ್, ಆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಹೊರಬೀಳುವ ದಿನವೇ ಶವವಾಗಿ ಪತ್ತೆಯಾಗಿದ್ದಾನೆ.

ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣ ಕುರಿತು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ತೀರ್ಪು ಹಾಗೂ ಅಂತಿಮ ಆದೇಶವು ಸೋಮವಾರ (ನ.23) ಹೊರಬೀಳುವುದಾಗಿ ಜಿಲ್ಲಾ ನ್ಯಾಯಾಲಯದ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಿಘ್ನೇಶ್ ಶವ ಪತ್ತೆಯಾಗಿದೆ.

- Advertisement -

‘ಜಸ್ಟೀಸ್ ಫಾರ್ ವಿನಾಯಕ್ ಬಾಳಿಗಾ’ ಅಭಿಯಾನ ನಡೆಸುತ್ತಿರುವ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಪ್ರೊ. ನರೇಂದ್ರ ನಾಯಕ್ ಅವರು ವಿಘ್ನೇಶ್ ನಾಯಕ್ ಸಾವು ಪ್ರಕರಣವನ್ನು ‘ಅನುಮಾನಾಸ್ಪದ ಆತ್ಮಹತ್ಯೆ’ ಎಂದು ಅಭಿಪ್ರಾಯ ಪಟ್ಟಿರುವುದಾಗಿ ವರದಿಯೊಂದು ತಿಳಿಸಿದೆ.

ಯುವಕನ ಅಸ್ವಾಭಾವಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp