ಮಿಠಾಯಿ ತಿನ್ನಲು ಬಿಡುವುದಿಲ್ಲ ಎಂದು  ತಾಯಿಯ ವಿರುದ್ಧವೇ ದೂರು ನೀಡಿದ ಮಗು: ವೀಡಿಯೋ ವೈರಲ್

Prasthutha|

ಭೋಪಾಲ್: ಮಿಠಾಯಿ ತಿನ್ನಲು ಬಿಡುವುದಿಲ್ಲ ಎಂದು ಆರೋಪಿಸಿ  ಮೂರು ವರ್ಷದ ಮಗುವೊಂದು ತನ್ನ ತಾಯಿಯ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರಿಗೆ ದೂರು ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಈ ಘಟನೆ ಮಧ್ಯಪ್ರದೇಶದ ಬುರ್ಹಾನ್ ಪುರದಲ್ಲಿ ನಡೆದಿದ್ದು, ಮೂರು ವರ್ಷದ ಬಾಲಕ ಸದ್ದಾಂ, ತನ್ನ ತಾಯಿ ಕ್ಯಾಂಡಿಗಳು ಮತ್ತು ಚಾಕೊಲೇಟ್ ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ತನ್ನ ತಂದೆಯೊಂದಿಗೆ ಬಂದು ಪೊಲೀಸ್ ಅಧಿಕಾರಿಯೊಂದಿಗೆ ದೂರು ನೀಡಿದ್ದಾನೆ.

ಆ ಮಗುವಿನ ದೂರನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ದೂರನ್ನು ಸಾವಧಾನದಿಂದ ಕೇಳಿಕೊಂಡು ಶ್ರದ್ಧೆಯಿಂದ ಬರೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಅಮ್ಮಿ ನನ್ನ ಮಿಠಾಯಿಗಳನ್ನು ಕದ್ದಿದ್ದಾರೆ, ಅವರನ್ನು    ಜೈಲಿಗೆ ಹಾಕು ಎಂದು ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕಾ ನಾಯಕ್ ಗೆ ಮಗು ಹೇಳುವುದನ್ನು ಕಾಣಬಹುದು.

- Advertisement -

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವಿನ ಮುಗ್ಧತೆಗೆ ಜನರು ಮಾರು ಹೋಗಿದ್ದಾರೆ.

Join Whatsapp