ಕಾಲು ಮುರಿದು ಹಾಕಿ, ಜಾಮೀನು ಕೊಡಿಸುತ್ತೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಶಿಂಧೆ ಬಣದ ಶಾಸಕ

Prasthutha|

ಮುಂಬೈ: ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಶಿಂಧೆ ಬಣದ ಶಾಸಕ ಪ್ರಕಾಶ್ ಸುರ್ವೆ, “ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಕಾಲು ಮುರಿಯಿರಿ. ನಾನು ನಿಮಗೆ ಜಾಮೀನು ಕೊಡಿಸಲು ಮರುದಿನ ಬರುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಸುರ್ವೆ ವಿರುದ್ಧ ದೂರು ದಾಖಲಾಗಿದೆ.

- Advertisement -

ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಗೊಳಿಸಲು ಶಿಂಧೆಯವರ ಬಂಡಾಯ ಬಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಕಾಶ್ ಸುರ್ವೆ ಅವರು, ಠಾಕ್ರೆ ನೇತೃತ್ವದ ಶಿವಸೇನೆ ನೈಜವೇ ಅಥವಾ ಶಿಂಧೆ ಬಣ ನೈಜವೇ ಎಂಬುವುದರ ಕುರಿತು ಅವರು ಮಾತನಾಡುತ್ತಿದ್ದರು.

ಕಾಲು ಮುರಿಯಲು ಕರೆ ನೀಡುತ್ತಿರುವ ಪ್ರಕಾಶ್ ಸುರ್ವೆ ಅವರ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಾರಾದರೂ ನಿಮಗೆ ಏನಾದರೂ ಹೇಳಿದರೆ ಅವರಿಗೆ ತಕ್ಕುದಾಗಿ ಉತ್ತರಿಸಿ. ಇಲ್ಲಿ ಯಾರ ದಾದಾಗಿರಿಯನ್ನು ಸಹಿಸುವುದಿಲ್ಲ. ನೀವು ಅವರನ್ನು ಹೊಡೆಯಿರಿ. ಪ್ರಕಾಶ್ ಸುರ್ವೆ ಎಂಬ ನಾನು, ನಿಮಗಾಗಿ ಅಲ್ಲಿರುತ್ತೇನೆ. ನೀವು ಅವರ ಕೈಯನ್ನು ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲುಗಳನ್ನು ಮುರಿಯಿರಿ. ಮರುದಿನ ನಾನು ನಿಮಗೆ ಜಾಮೀನು ಕೊಡಿಸುತ್ತೇನೆ, ಚಿಂತಿಸಬೇಡಿ. ನಾವು ಯಾರೊಂದಿಗೂ ಜಗಳವಾಡುವುದಿಲ್ಲ. ಆದರೆ ಯಾರಾದರೂ ನಮ್ಮೊಂದಿಗೆ ಜಗಳಕ್ಕಿಳಿದರೆ ನಾವು ಬಿಡುವುದಿಲ್ಲ ಎಂದು ಹೇಳಿತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಈ ಕುರಿತ ವೀಡಿಯೋ ಆಗಸ್ಟ್ 14 ರಂದು ಮುಂಬೈನ ಮಗಥಾಣೆ ಪ್ರದೇಶದ ಕೊಕನಿ ಪದ ಬುದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಎಂದು ಹೇಳಲಾಗಿದೆ.

Join Whatsapp