ಶೇಖ್ ಖಲೀಫಾ ನಿಧನ ಹಿನ್ನೆಲೆ: ಭಾರತದ ಪರ ಯುಎಇ’ಗೆ ತೆರಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Prasthutha|

ದುಬೈ: ಶುಕ್ರವಾರ ನಿಧನರಾದ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಅವರಿಗೆ ಭಾರತೀಯ ಸರ್ಕಾರದ ಪರವಾಗಿ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ ಅರಬ್‌ ಸಂಯುಕ್ತ ಸಂಸ್ಥಾನಕ್ಕೆ ತೆರಳಿದ್ದಾರೆ.

- Advertisement -

ಅಬುದಾಬಿಗೆ ತೆರಳಿರುವ ಭಾರತೀಯ ಉಪರಾಷ್ಟ್ರಪತಿಯವರನ್ನು ಯುಎಇ ಅಧಿಕಾರಿಗಳು ಬರಮಾಡಿಕೊಂಡರು. ತನ್ನ ಪ್ರವಾಸವನ್ನು ಉಪರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.   

ಶೇಖ್‌ ಖಲೀಫಾ ಅವರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಭಾರತದ ವಿದೇಶಾಂಗ ಸಚಿವರಾಗಿರುವ ಎಸ್‌.ಜೈಶಂಕರ್‌ ಅವರು ಶನಿವಾರ ನವದೆಹಲಿಯಲ್ಲಿರುವ ಯುಎಇ ರಾಯಭಾರ ಕಚೇರಿಗೆ ಭೇಟಿ ಕೊಟ್ಟಿದ್ದರು.



Join Whatsapp