ವಿಎಚ್ ಪಿ ತೊರೆದು ಸಿಪಿಐಎಂ ಸೇರಿದ ಮುಖಂಡ

Prasthutha|

►ಕೋಮುವಾದ ಬೆಳೆದರೆ ದೇಶಾದ್ಯಂತ ಸಂಘರ್ಷ – ಮಾಜಿ ಸಂಘಪರಿವಾರದ ನಾಯಕನ ಆತಂಕ

- Advertisement -

ಎರ್ನಾಕುಲಂ: ವಿಶ್ವ ಹಿಂದೂ ಪರಿಷತ್ ಎರ್ನಾಕುಲಂ (ಕೊಚ್ಚಿ) ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಚಂದ್,  ಸಂಘಪರಿವಾರ ಬಿಟ್ಟು ಎಡಪಕ್ಷವಾದ ಸಿಪಿಐ(ಎಂ) ಸೇರಿದ್ದಾರೆ.

ವೃತ್ತಿಯಲ್ಲಿ ವಕೀಲರೂ ಆಗಿರುವ ಸುಭಾಷ್ ಚಂದ್, ಕೇರಳ ಹೈಕೋರ್ಟ್ ನಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ‘ಸೆಂಟ್ರಲ್ ಗವರ್ನಮೆಂಟ್ ಕೌನ್ಸಿಲ್ ತಪಸ್ಯ- ತೃಪೂಣಿತ್ತರ ಅಧ್ಯಕ್ಷ ಮೊದಲಾದ ಸ್ಥಾನ ಅಲಂಕರಿಸಿದ್ದರು.

- Advertisement -

ಸಂಘಪರಿವಾರದ ಸಿದ್ಧಾಂತಕ್ಕೆ ವಿರೋಧವಿರುವ ನಿಟ್ಟಿನಲ್ಲಿ ಈ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಜಾತ್ಯತೀತ ಶಕ್ತಿಗಳನ್ನು ಬಲಪಡಿಸುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಸುಭಾಷ್ ಚಂದ್ ಹೇಳಿದ್ದಾರೆ.

ಕೋಮುವಾದ ಬೆಳೆದಷ್ಟು ಜಾತ್ಯತೀತ ವಾದ ದುರ್ಬಲವಾಗುತ್ತದೆ. ಇದು ಮುಂದುವರಿದರೆ ಭಾರತದಲ್ಲಿ ಶಾಂತಿ ಕನಸಿನ ಮಾತು. ಕೋಮು ಸಂಘರ್ಷಗಳು ಇಲ್ಲಿ ನಿತ್ಯ ತಾಂಡವವಾಡಬಹುದು. ಇದನ್ನು ತಡೆಯುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಯಾಗಿದೆ ಎಂದವರು ಹೇಳಿದ್ದಾರೆ.



Join Whatsapp