ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝುಲ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರ್ ಎಸ್ ಎಸ್ ಸಹ ಸಂಘಟನೆ ಬಜರಂಗದಳದ ಆರು ಮಂದಿ ಕಾರ್ಯಕರ್ತರನ್ನು ಮಂಗಳೂರು ನ್ಯಾಯಾಲಯವು ಆಗಸ್ಟ್ 15ರ ತನಕ ಪೊಲೀಸ್ ಕಸ್ಟಡಿಗೆ ನೀಡಿದೆ.
ಸುರತ್ಕಲ್ ಕೃಷ್ಣಾಪುರ ನಿವಾಸಿ ಶ್ರೀನಿವಾಸ್ ಯಾನೆ ಶೀನು , ಕಟೀಲು ಕಲ್ವಾರ್ ನಿವಾಸಿ ಸುಹಾಸ್ ಶೆಟ್ಟಿ , ಸುರತ್ಕಲ್ ಕೃಷ್ಣಾಪುರ ನಿವಾಸಿ ಅಭಿ ಯಾನೆ ಅಭಿಷೇಕ್ , ಸುರತ್ಕಲ್ ಕುಳಾಯಿ ನಿವಾಸಿ ಮೋಹನ್ ಮತ್ತು ಗಿರಿಧರ್ ಎಂಬುವವರಿಗೆ ಆಗಸ್ಟ್ 15ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚುವರಿ ಮಾಹಿತಿ ಕಲೆ ಹಾಕುವ ಸಲುವಾಗಿ ಎರಡು ವಾರಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಕೇಳಿಕೊಂಡಿದ್ದರು. ಅದರಂತೆ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.