ಹಿರಿಯ ಪತ್ರಕರ್ತ ವಿನೋದ್ ದುವಾ ಆರೋಗ್ಯ ಸ್ಥಿತಿ ಚಿಂತಾಜನಕ

Prasthutha|

ನವದೆಹಲಿ: ಕಳೆದ ಹಲವು ದಿನಗಳಿಂದ ಕೋವಿಡ್‌ ನಂತರದ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ದೇಶದ ಹಿರಿಯ ಪತ್ರಕರ್ತ ವಿನೋದ್ ದುವಾ (67)ರವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ತಿಳಿಸಿದ್ದಾರೆ.

- Advertisement -

ಈ ಹಿಂದೆ ಇವರ ಪತ್ನಿಗೆ ಕೋವಿಡ್ ತಗುಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು . ಕೋವಿಡ್ ನಂತರದ ಹಲವು ಅನಾರೋಗ್ಯದ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಸ್ತುತ ಐಸಿಯುನಲ್ಲಿದ್ದಾರೆ.

ದೂರದರ್ಶನ ಮತ್ತು ಎನ್‌ಡಿಟಿವಿಯಲ್ಲಿ ಹಿಂದಿ ಪತ್ರಕರ್ತರಾಗಿ ವಿನೋದ್ ದುವಾ ಪ್ರಸಿದ್ದರಾದವರು. ತಮ್ಮ ನಿಷ್ಟೆಯ ಮತ್ತು ಬದ್ಧತೆಯ ವರದಿಗಾರಿಕೆಗಾಗಿ ಅವರು ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿ ಮತ್ತು 2008 ರಲ್ಲಿ ಭಾರತ ಸರ್ಕಾರದಿಂದ ಪತ್ರಿಕೋದ್ಯಮಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

Join Whatsapp