ಉತ್ತರ ಪ್ರದೇಶ ವಿಧಾನ ಪರಿಷತ್ ಗ್ಯಾಲರಿಯಲ್ಲಿ ಸಾವರ್ಕರ್ ಫೋಟೊ ವಿವಾದ : ಕಾಂಗ್ರೆಸ್, ಎಸ್ ಪಿ ಆಕ್ಷೇಪ

Prasthutha|

ಲಖನೌ : ಉತ್ತರ ಪ್ರದೇಶ ವಿಧಾನ ಪರಿಷತ್ ಗ್ಯಾಲರಿಯಲ್ಲಿ ವೀರಸಾವರ್ಕರ್ ಭಾವಚಿತ್ರ ಹಾಕಲಾಗಿದ್ದು, ಇದಕ್ಕೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆದಷ್ಟು ಬೇಗ ಚಿತ್ರ ಗ್ಯಾಲರಿಯಿಂದ ವೀರಸಾವರ್ಕರ್ ಭಾವಚಿತ್ರವನ್ನು ತೆಗೆಯುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.

- Advertisement -

ಸಾವರ್ಕರ್ ಹೆಸರಿನ ಸುತ್ತಲೂ ವಾದ-ವಿವಾದಗಳಿವೆ. ಅಲ್ಲದೆ ಸಾವರ್ಕರ್ ಜೈಲಿನಿಂದ ಹೊರಬರಲು ಬ್ರಿಟಿಷರಿಂದ ಕ್ಷಮೆ ಯಾಚಿಸಿದ್ದರು ಎಂದು ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ದೂರಿದ್ದಾರೆ.

ಕಾಂಗ್ರೆಸ್ ನಾಯಕ ದೀಪಕ್ ಸಿಂಗ್ ವಿಧಾನ ಪರಿಷತ್ ಸಭಾಪತಿಗೆ ಪತ್ರ ಬರೆದು, ಸಾವರ್ಕರ್ ಭಾವಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಧಾನಪರಿಷತ್ ಸಭಾಪತಿ ಅಧಿಕಾರಿಗಳಿಂದ ವಿವರ ಕೋರಿದ್ದಾರೆ.  



Join Whatsapp