ಟ್ರಂಪ್ ಸರಕಾರದ ‘ಮುಸ್ಲಿಮರ ಪ್ರವಾಸ ನಿಷೇಧ ನೀತಿ’ ರದ್ದುಗೊಳಿಸಿದ ಜೋ ಬೈಡನ್

Prasthutha|

ವಾಷಿಂಗ್ಟನ್ : ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ್ದು, ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಅವುಗಳಲ್ಲಿ ಟ್ರಂಪ್ ಸರಕಾರದಲ್ಲಿ ಜಾರಿಗೊಳಿಸಲಾಗಿದ್ದ ಮುಸ್ಲಿಮರ ಪ್ರವಾಸ ನಿಷೇಧ ರದ್ದತಿ ಸೇರಿದಂತೆ 17 ಪ್ರಮುಖ ಆದೇಶಗಳಿಗೆ ಬೈಡನ್ ಸಹಿ ಮಾಡಿದ್ದಾರೆ.

- Advertisement -

ಟ್ರಂಪ್ ಆಡಳಿತದ ಮುಸ್ಲಿಮರ ಪ್ರವಾಸ ನಿಷೇಧ ನೀತಿಯಿಂದಾಗಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳಿಂದ ಪ್ರವಾಸಿಗರು ಅಮೆರಿಕ ಪ್ರಯಾಣಕ್ಕೆ ನಿರ್ಬಂದಿಸಲಾಗಿತ್ತು. ಇದೀಗ ಈ ನೀತಿ ರದ್ದಾಗಿದ್ದು, ಇನ್ನು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳ ಪ್ರಜೆಗಳಿಗೂ ವೀಸಾ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಬೈಡನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಅಕ್ರಮ ವಲಸಿಗರನ್ನು ಪತ್ತೆಮಾಡಿ ಗಡಿಪಾರು ಮಾಡುವ ಟ್ರಂಪ್ ಸರಕಾರದ ಕ್ರಮಕ್ಕೂ ಬೈಡನ್ ತಡೆಯೊಡ್ಡಿದ್ದಾರೆ. ಮೆಕ್ಸಿಕೊ ಗಡಿಯುದ್ಧಕ್ಕೂ ಗೋಡೆ ನಿರ್ಮಾಣ ಕಾಮಗಾರಿಗೂ ತಡೆ ನೀಡಲಾಗಿದೆ. ಹವಮಾನ ಕುರಿತ ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆಗೂ ಬೈಡನ್ ನಿರ್ಧರಿಸಿದ್ದಾರೆ.  

Join Whatsapp