ಬಸವಣ್ಣ ಮೂರ್ತಿಗೆ ಮಸಿ: ವೀರಶೈವರಿಂದ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

Prasthutha|

ಬೆಂಗಳೂರು: ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಹಲಸಿ ಗ್ರಾಮದಲ್ಲಿ ಬಸವಣ್ಣ ಮೂರ್ತಿಗೆ ಮಸಿ ಬಳೆದು ಅವಮಾನಿಸಿದ್ದನ್ನು ಖಂಡಿಸಿ , ದುಷ್ಕರ್ಮಿಗಳನ್ನು ಕೂಡಲೇ ಬಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ, ವೀರಶೈವ ಮಹಾಸಭಾ ಸದಸ್ಯರು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಬೇಟಿ ನೀಡಿ ಮನಿವಿ ಸಲ್ಲಿಸಿದರು.

- Advertisement -

ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ. ಮಹಾತೇಶ್ ಎಂ. ಪಾಟೀಲ್, ಮಾತನಾಡಿ, ಸಾಮಾಜಿಕ ಹೋರಾಟಗಾರರು, ಮಠಾಧೀಶರು, ಸ್ವಾತಂತ್ರ ಹೋರಾಟಗಾರರು, ಧರ್ಮ ಹೋರಾಟಗಾರನ್ನ ಯಾವುದೇ ಸಾಮಾಜಿಕ ವಿವಾದಗಳಲ್ಲಿ,ಗಡಿ ವಿವಾದಗಳಲ್ಲಿ,ಭಾಷಾ ವಿವಾದಗಳಲ್ಲಿ, ಮದ್ಯ ಏಳೆಯಬಾರದು ಯಾವುದೇ ರೀತಿಯ ಸಂಸ್ಕೃತಿ ಇದ್ದವರು ಈ ರೀತಿ ಕೃತ್ಯ ಮಾಡಲ್ಲ ಇದು ಯಾವುದೊ ಅವಿವೇಕಿಗಳು ಮಾಡಿದ ಕೃತ್ಯ ಇದನ್ನು ನಾವು ಖಂಡಿತಸುತ್ತೇವೆ ಎಂದು ಹೇಳಿದರು

ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ರೇಣುಕ ಪ್ರಸನ್ನ ಮಾತನಾಡಿ, ಬಸವಣ್ಣ ನವರು,ವಿಶ್ವಗುರು ಮಹಾನ ಮಾನವತಾವಾದಿ, ಅವರ ಸಿದ್ದಂತಗಳು ವಿಶ್ವಕ್ಕೆ ಮಾದರಿ,ಕನಕದಾಸರು, ವಾಲ್ಮೀಕಿ, ದೇವರ ದಾಸಿಮಯ್ಯನವರು ಅಲ್ಲಮಪ್ರಭುಗಳು ಅಕ್ಕಮಹಾದೇವಿ ಇನ್ನು ಮುಂತಾದ ಶರಣರು ಶರಣಿಯರು ಹಾಗೂ ಸಂಗೊಳ್ಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೆಳದಿ ಚನ್ನಮ್ಮ ನವರು ಸ್ವತಂತ್ರಕ್ಕಾಗಿ, ನಾಡಿಗಾಗಿ ಹೋರಾಡಿದವರು,ಶಿವಾಜಿ ಮಹಾರಾಜ ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ ಹೋರಾಡಿದವರು,ಇಡೀ ವಿಶ್ವವೇ ಭಾರತದ ಶರಣರು, ರಾಷ್ಟ ಪ್ರೇಮಿಗಳು, ಮಠಮಾನ್ಯ ಗಳ ಬಗ್ಗೆ ಮಾತನಾಡುತ್ತಿರುವಾಗ ಈ ರೀತಿಯ ಕೃತ್ಯವನ್ನು ಎಸಗುವುದು ಖಂಡಿನಿಯ ಯಾವುದೇ ಮಹಾನ್ ವ್ಯಕ್ತಿಗಳ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ, ಭಾಷಣ ಗಳಲ್ಲಿ ಹಾಗೂ ಪುತ್ತಳಿಗಳಿಗೆ ಅವಮಾನ ಮಾಡುವದರ ಮೂಲಕ ಇಂತಹ ಸನ್ನಿವೇಶಗಳನ್ನು ಕೆಲವು ಕಿಡಗೇಡಿಗಳು ದುರುಪಯೋಗ ಪಡಿಸಿಕೊಂಡು ಸಮಾಜದ ಶಾಂತಿಯನ್ನು ಹಾಳುಮಾಡುವ,ರಾಷ್ಟ್ರವನ್ನು ಒಡೆಯುವ ಕೆಲಸ ಮಾಡುತಿದ್ದಾರೆ. ಇಂತಹ ದುಷ್ಟರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

- Advertisement -

ಅಧಿವೇಶನ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ಮುಂದೆ ಇಂತಹ ಕೃತ್ಯ ನಡೆಯದಿರುವ ಹಾಗೆ ಸೂಕ್ತ ಕಾನೂನನ್ನು ತರಬೇಕು ಎಂದು ಹೇಳಿದರು.

ವೀರಶೈವ ಮುಖಂಡರಾದ ಬಿ.ಎಸ್.ಸಚ್ಚಿದಾನಂದ ಮೂರ್ತಿ, ಮನೋಹರ್ ಅಬ್ಬಿಗೆರೆ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಗುರುಸ್ವಾಮಿ, ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಸುನೀಲ್, ಜಯಶೀಲಗೌಡ, ವಿಜಯ್ ಪಾಟೀಲ್, ಬಿ.ಆರ್.ಪಾಟೀಲ್ ಸೇರಿದಂತೆ ಅನೇಕರು ಹಾಜರಿದ್ದರು.

Join Whatsapp