ಖಾಸಗಿ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ

Prasthutha|

ಖಾಸಗಿ ಶಿಕ್ಷಣ ಕ್ಷೇತ್ರವು ಭ್ರಷ್ಟರ ಕೂಟವಾಗುತ್ತಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ, ಮಠಾಧಿಪತಿಗಳು ಬೀದಿಗೆ ಬರಬಾರದು ಹಾಗೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಅವರು ಪ್ರತಿಕೃತಿ ದಹಸಿ ಸರಕಾರದ ವಿರುದ್ಧ ಪ್ರತಿಭಟಿಸಿದರು.

- Advertisement -

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ಶಾಸಕರು, ಸಂಸದರು, ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಿಗೆ ಐಟಿ ದಾಳಿ ಮಾಡಿ 400 ಕೋಟಿ ರೂಪಾಯಿ ಮೋಸದ ಹಣವೆಂದು ಹೇಳಿದ್ದಾರೆ. ಆದರೆ ಅದು 400 ಕೋಟಿಯಲ್ಲ, 40 ಸಾವಿರ ಕೋಟಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಭ್ರಷ್ಟರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜು ಶ್ರೀಮಂತರ ಕಾಲೇಜಾಗಿದೆ. ಅದು ಕನ್ನಡ ವಿರೋಧಿಯಾಗಿದೆ. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಬಡವರಿಗೆ ಸೀಟು ಉಚಿತವಾಗಿ ಕೊಟ್ಟಿಲ್ಲದಿರುವುದು ಅನ್ಯಾಯ ಮತ್ತು ರಾಜ್ಯಕ್ಕೆ ಮಾಡಿರುವ ಮೋಸವೆಂದು ಅವರು ಆರೋಪಿಸಿದರು.

- Advertisement -

ಇದೇ ರೀತಿ ಶಿಕ್ಷಣ ಸಂಸ್ಥೆಗಳಲ್ಲಿ ಅನ್ಯಾಯ, ಮೋಸ ಮುಂದುವರಿದರೆ ದಂಗೆ ಏಳಬೇಕಾಗುತ್ತದೆ ಎಂದು ಅವರು ಈ ವೇಳೆ ಎಚ್ಚರಿಕೆ ನೀಡಿದರು.



Join Whatsapp