ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಜಿಲ್ಲಾ ಸಮಿತಿಯಿಂದ SDPI ಬೆಂಬಲಿತ ಮಹಿಳಾ ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆಯರಿಗೆ ಸನ್ಮಾನ

Prasthutha|

ಬಂಟ್ವಾಳ : ವುಮೆನ್ ಇಂಡಿಯಾ ಮೂಮೆಂಟ್ ದ.ಕ.ಜಿಲ್ಲಾ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ SDPI ಬೆಂಬಲಿತರಾಗಿ ಆಯ್ಕೆಯಾದಂತಹ ಮಹಿಳಾ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮವನ್ನು ಬಂಟ್ವಾಳದಲ್ಲಿ ಹಮ್ಮಿಕೊಳ್ಳಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಸಜಿಪ ಮುನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೌಸ್ತಿನ್ ಡಿ’ಸೋಜಾ, ಪಾವೂರು ಗ್ರಾ. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕಮರುನ್ನೀಸ, ಸಜಿಪ ನಡು ಅಧ್ಯಕ್ಷೆ ಶ್ರೀಮತಿ ಫೌಝಿಯಾ, ಸಜಿಪ ಮನ್ನೂರು ಉಪಾಧ್ಯಕ್ಷೆ ಸಬೀನಾ ನಂದಾವರ, ಗುರುಪುರ ಉಪಾಧ್ಯಕ್ಷೆ ದಿಲ್ಸಾದ್ ಅಶ್ರಪ್, ಮಲ್ಲೂರು ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ ಇವರಿಗೆ ಸನ್ಮಾನಿಸಲಾಯಿತು.

ವುಮೆನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಸಭೆಯನ್ನುದ್ದೇಶಿಸಿ ಮಾತನಾಡಿದರು, ವಿಮ್ ದ.ಕ. ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮತ್ತು ರಾಜ್ಯ ಪ್ರ‌.ಕಾರ್ಯದರ್ಶಿ ಆಯಿಶಾ ಬಜ್ಪೆ ಸಂದರ್ಭೋಚಿತವಾಗಿ ಮಾತನಾಡಿ, ನೂತನ ಜನಪ್ರತಿನಿಧಿಗಳಿಗೆ ಶುಭ ಹಾರೈಸಿದರು.

- Advertisement -

ಕಾರ್ಯಕ್ರಮದಲ್ಲಿ, ಮಂಗಳೂರು ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್, ವಿಮ್ ದ.ಕ.ಜಿಲ್ಲಾ ಕಾರ್ಯದರ್ಶಿ ಝಹನಾ ಬಂಟ್ವಾಳ, ಜಿಲ್ಲಾಉಪಾಧ್ಯಕ್ಷೆ ಮರಿಯಮ್ಮ ಟಿ.ಎಸ್. ಝುಲೈಕಾ ಬಂಟ್ವಾಳ ಮುಂತಾದವರು ಭಾಗವಹಿಸಿದರು.

Join Whatsapp