ಜಾತಿವಾದ ಆರೋಪ| ವಾಸೀಂ ಜಾಫರ್‌ಗೆ ಮಾಜಿ ಆಟಗಾರರ ಬೆಂಬಲ

Prasthutha|

ಹೊಸದಿಲ್ಲಿ : ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಮಾಡಿರುವ ಜಾತಿವಾದದ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಬೆಂಬಲಕ್ಕೆ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಕರ್ನಾಟಕದ ಮಾಜಿ ಬೌಲರ್ ದೊಡ್ಡ ಗಣೇಶ್ ನಿಂತಿದ್ದಾರೆ. ಕೆಲವು ದಿನಗಳ ಹಿಂದೆ ಉತ್ತರಾಖಂಡ ಕ್ರಿಕೆಟ್‌ನಲ್ಲಿ ಪದಾಧಿಕಾರಿಗಳ ಹಸ್ತಕ್ಷೇಪ ಹಾಗೂ ಪಕ್ಷಪಾತದಿಂದ ಬೇಸತ್ತು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಾಸೀಂ ಜಾಫರ್ ಮೇಲೆ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮಹಿಮ್ ವರ್ಮಾ ಅವರು ಜಾತಿವಾದದ ಆರೋಪ ಹೊರಿಸಿದ್ದರು.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ‘ನಿಮ್ಮೊಂದಿಗೆ ನಾವಿದ್ದೇವೆ ವಾಸೀಂ. ನೀವು ಸರಿಯಾದ ಕೆಲಸ ಮಾಡಿದ್ದೀರಿ. ನಿಮ್ಮ ಮಾರ್ಗದರ್ಶನವನ್ನು ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ ಎಂಬುದೇ ದುರದೃಷ್ಟಕರ’ ಎಂದು ತಿಳಿಸಿದ್ದಾರೆ.

ಭಾರತದ ಮಾಜಿ ಬೌಲರ್ ದೊಡ್ಡ ಗಣೇಶ್ ಕೂಡಾ ಟ್ವೀಟ್ ಮಾಡಿದ್ದು, ‘ವಾಸೀಂ ಕ್ರಿಕೆಟ್‌ನ ಅತ್ಯುತ್ತಮ ರಾಯಭಾರಿಯಾಗಿದ್ದು, ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದೀರಿ. ನಿಮ್ಮಂತಹ ಮಾಜಿ ಆಟಗಾರನಿಗೆ ಈ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನೀವು ಕ್ರಿಕೆಟ್‌ನ ರತ್ನ, ಮಾನವ ಹಾಗೂ ಸಹೋದರ. ನೀವು ಹಾಗೂ ನಿಮ್ಮ ಸಮಗ್ರತೆಯು ಕ್ರಿಕೆಟ್ ಜಗತ್ತಿಗೆ ತಿಳಿದಿದೆ’ ಎಂದು ತಿಳಿಸಿದ್ದಾರೆ.

- Advertisement -
https://twitter.com/doddaganesha/status/1359695379055345664

ಭಾರತದ ಎಡಗೈ ವೇಗಿ ಇರ್ಫಾನ್ ಪಠಾಣ್ ಕೂಡಾ ಜಾಫರ್ ಪರ ನಿಂತಿದ್ದು, ನಿಮಗೆ ವಿವರಣೆ ನೀಡಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

Join Whatsapp