ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ: ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ ಪೊಲೀಸರು

Prasthutha|

- Advertisement -

ಚೆನ್ನೈ: ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ ಸಂಬಂಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರ ಚೆನ್ನೈನ ತಮ್ಮ ನಿವಾಸದಲ್ಲಿ ವಾಣಿ ಜಯರಾಂ ಅವರು ಶವವಾಗಿ ಪತ್ತೆಯಾಗಿರುವ ಕಾರಣ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣದ ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

- Advertisement -

2018ರಲ್ಲಿ ಪತಿ ಜಯರಾಂ ನಿಧನರಾದ ನಂತರ ವಾಣಿ ಅವರು ಚೆನ್ನೈನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ವಾಣಿ ಮತ್ತು ಜಯರಾಂ ದಂಪತಿಗೆ ಯಾವುದೇ ಮಕ್ಕಳು ಇಲ್ಲ. ಶುಕ್ರವಾರ ರಾತ್ರಿ ಮನೆಯಲ್ಲಿ ವಾಣಿ ಜಯರಾಂ ಒಬ್ಬರೇ ಇದ್ದು, ಬೀಗ ಹಾಕಿಕೊಂಡು ಮಲಗಿದ್ದರು. ವಾಣಿ ಜಯರಾಂ ಅವರ ನಿವಾಸದಲ್ಲಿ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ಕೆಲಸದಾಕೆ ಎಂದಿನಂತೆ ಶನಿವಾರ ಬಂದಿದ್ದರು. ಆದರೆ, ವಾಣಿ ಜಯರಾಂ ಅವರು ಮನೆ ಬಾಗಿಲು ತೆರೆದಿರಲಿಲ್ಲ.

Join Whatsapp