ಖ್ಯಾತ ಮುಸ್ಲಿಮ್ ಬರಹಗಾರ್ತಿ ಯು.ಟಿ ಫರ್ಝಾನ ಅಶ್ರಫ್ ಜೆಡಿಎಸ್ ಸೇರ್ಪಡೆ

Prasthutha|

ಮಂಗಳೂರು: ಖ್ಯಾತ ಮುಸ್ಲಿಮ್  ಬರಹಗಾರ್ತಿ ಯು.ಟಿ ಫರ್ಝಾನ ಅಶ್ರಫ್ ಅವರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

- Advertisement -

ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್’ನಲ್ಲಿ ಮಾಹಿತಿ ನೀಡಿದ್ದಾರೆ.

“ಹೊಸ ಆಲೋಚನೆಗಳ ನವ ಆಶೋತ್ತರಗಳ ಯುವ ಜನತೆ ರಾಜಕೀಯದೊಳಗೆ ಸೇರಬೇಕು; ನಮ್ಮ ನಾಡಿನ ಪ್ರಗತಿಗಾಗಿ ಶ್ರಮಿಸಬೇಕು. ಯುವ ಜನತೆ ತಮ್ಮ ಕನಸುಗಳನ್ನು ಕೈಗೆಟುಕಿಸುವಂತಹಾ ಸಮೃದ್ಧಿಯ ಕರ್ನಾಟಕ ನಮ್ಮದಾಗಬೇಕು ಎಂಬ ಕನಸು ಬಲುದಿನಗಳಿಂದಲೂ ಮನವನ್ನು ಗುಂಗಾಗಿ ಕಾಡುತ್ತಿತ್ತು.  ಆ ಕನಸಿನ ಭಾಗವಾಗಿ ಇಂದು ನಾನು ನಮ್ಮ ಕರ್ನಾಟಕದ ಹೆಮ್ಮೆಯ ಕನ್ನಡಿಗರ ಪಕ್ಷ ಜಾತ್ಯತೀತ ಜನತಾದಳಕ್ಕೆ ಕನ್ನಡದ ಪ್ರಥಮ ಪ್ರಧಾನಿ ಹೆಚ್ ಡಿ ದೇವೇಗೌಡರವರ ಆಶೀರ್ವಾದದೊಂದಿಗೆ,  ಮಾಜಿಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿರವರು ಮತ್ತು ಮಾಜಿ ಕೇಂದ್ರ ಸಚಿವರಾದ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ, ರಾಜ್ಯ ವಕ್ತಾರೆ ನಜ್ಮಾ ಚಿಕ್ಕನೇರಳೆ ಅವರ ಉಪಸ್ಥಿತಿಯಲ್ಲಿ  ಅಧಿಕೃತವಾಗಿ  ಜೆಡಿಎಸ್ ಸೇರಿರುವುದಾಗಿ ಅವರು ಬುಕ್ ಪೇಜ್’ನಲ್ಲಿ ಬರೆದುಕೊಂಡಿದ್ದಾರೆ.  

- Advertisement -

ಫರ್ಝಾನ ಅವರನ್ನು ಜೆಡಿಎಸ್ ರಾಜ್ಯ ವಕ್ತಾರರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Join Whatsapp