ದೆಹಲಿ: ಸತತ ಮೂರನೇ ಬಾರಿಗೆ ವ್ಯಾಪಕ ಸುದ್ದಿಯಾಗುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಇಂದು ಮತ್ತೆ ಎಡವಿದೆ.
ನವದೆಹಲಿ – ವಾರಣಾಸಿ ಸಂಪರ್ಕಿಸುವ ರಸ್ತೆಯಲ್ಲಿ ಕ್ರಮಿಸುತ್ತಿರುವಾಗ, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಚಕ್ರಗಳು ಜಾಮ್ ಆಗಿ, ಸಂಚಾರ ಸ್ಥಗಿತಗೊಂಡಿದೆ. ಆ ಬಳಿಕ ಪ್ರಯಾಣಿಕರಿಗೆ ಪರ್ಯಾಯವಾಗಿ ರೈಲು ವ್ಯವಸ್ಥೆ ಕಲ್ಪಿಸಲಾಯಿತು ಎಂದು ತಿಳಿದು ಬಂದಿದೆ.
ದೆಹಲಿ ನಿಲ್ದಾಣದಿಂದ ಬೆಳಿಗ್ಗೆ 6 ಕ್ಕೆ ಹೊರಟ ರೈಲು, 90 ಕಿಲೋ ಮೀಟರ್ ನಷ್ಟು ಚಲಿಸಿ ಉತ್ತರ ಪ್ರದೇಶದ ಖುಜ್ರಾ ನಿಲ್ದಾಣದ ಬಳಿ ಸಮೀಪಿಸುವಾಗ ಈ ಗ್ರಹಾಚಾರ ಸಂಭವಿಸಿದೆ.
ಚಕ್ರ ಜಾಮ್ ಆದ ಪರಿಣಾಮ ರೈಲು ಸ್ಥಗಿತಗೊಂಡಿದ್ದು, ರೈಲಿನಲ್ಲಿದ್ದ1,068ರಷ್ಟು ಎಲ್ಲಾ ಪ್ರಯಾಣಿಕರನ್ನು ಇಳಿಸಿ, ಬೇರೆ ರೈಲಿನಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.