ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹತ್ತಿಸಿದ ಕಾರು ಮಾಲೀಕ !

Prasthutha|

ಮುಂಬೈ: ಶೋರೂಂನಿಂದ ಹೊಸ ಕಾರು ಡೆಲಿವರಿ ಪಡೆದು ಮನೆಗೆ ಆಗಮಿಸಿದಾಗ ಕಾರು ಬ್ಯಾಲೆನ್ಸ್ ತಪ್ಪಿ ಬೈಕ್ ಗಳಿಗೆ ಡಿಕ್ಕಿ ಹೊಡೆದ ಘಟನೆ ಮುಂಬೈನಲ್ಲಿ‌ ನಡೆದಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -



ಪಾರ್ಕ್ ಮಾಡಿದ್ದ ಹಲವು ಬೈಕ್ ಮೇಲೆ ಕಾರು ಹತ್ತಿದೆ. ಇನ್ನೇನು ಪಲ್ಟಿಯಾಬೇಕು ಅನ್ನುವಷ್ಟರಲ್ಲೇ ಕಾರು ನಿಲ್ಲಿಸಿದ್ದಾನೆ. ಇದರಿಂದ ಭಾರಿ ಅವಘಡವೊಂದು ತಪ್ಪಿದೆ. ಆದರೆ ಕಾರಿನ ಮುಂಭಾಗದ ಬಂಪರ್, ಟೈಯರ್, ವ್ಹೀಲ್ ಪುಡಿಯಾಗಿದೆ. ಇತ್ತ ನಿಲ್ಲಿಸಿದ್ದ ಹಲವು ಬೈಕ್‌ ಗಳು ನಜ್ಜು ಗುಜ್ಜಾಗಿದೆ.

Join Whatsapp